ಯುಪಿಎಸ್ ಸಿ, ಕೆಪಿಎಸ್ ಸಿ ಪರೀಕ್ಷೆಗೆ ಉಚಿತ ತರಬೇತಿ: ಅರ್ಜಿ ಆಹ್ವಾನ

Update: 2019-06-27 17:37 GMT

ಮಂಗಳೂರು: ಕರ್ನಾಟಕ ಸರಕಾರದ ವತಿಯಿಂದ ಯು.ಪಿ.ಎಸ್.ಸಿ ಮತ್ತು ಕೆ.ಪಿ.ಎಸ್.ಸಿ (ನಾಗರಿಕ ಸೇವೆ) ಪರೀಕ್ಷೆಗೆ ಉಚಿತ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2019-20ರ ಸಾಲಿನ ಯು.ಪಿ.ಎಸ್.ಸಿ ಮತ್ತು ಕೆ.ಪಿ.ಎಸ್.ಸಿ (ನಾಗರಿಕ ಸೇವೆ) ಪರೀಕ್ಷೆಗಾಗಿ ಉಚಿತ ತರಬೇತಿಗೆ ಅಲ್ಪಸಂಖ್ಯಾತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು , ಇದನ್ನು ತಮ್ಮ ಜಮಾಅತ್ ನಲ್ಲಿರುವ ಅರ್ಹ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳುವಂತೆ ಮತ್ತು ಜುಮಾ ನಮಾಝ್ ಬಳಿಕ ಈ ಬಗ್ಗೆ ಮಸೀದಿಯಲ್ಲಿ ಪ್ರಕಟನೆಗಾಗಿ ವಿನಂತಿಸಲಾಗಿದೆ.

ಎಲ್ಲಾ ವಿಷಯಗಳಿಗೆ ಪೂರ್ವ ಕೋಚಿಂಗ್ ಶುಲ್ಕವನ್ನು ಕರ್ನಾಟಕ ಸರಕಾರದ ಅಲ್ಪಸಂಖ್ಯಾತ ಇಲಾಖೆಯಿಂದ ಪಾವತಿಸಲಾಗುವುದು. ದೆಹಲಿ ಮತ್ತು ಹೈದರಾಬಾದ್‌ನಲ್ಲಿ ತರಬೇತಿ ಪಡೆಯಲಿಚ್ಛಿಸುವ ಅಭ್ಯರ್ಥಿಗೆ 13,000 ರೂ ., ಬೆಂಗಳೂರಿನಲ್ಲಿ ತರಬೇತಿ ಪಡೆಯುವ ಹೊರಗಿನ ಅಭ್ಯರ್ಥಿಗಳಿಗೆ ತಿಂಗಳಿಗೆ 6,000 ರೂ., ಮತ್ತು ಸ್ಥಳೀಯ ಅಭ್ಯರ್ಥಿಗೆ ತಿಂಗಳಿಗೆ 3,000 ರೂ., ಸ್ಟೈಫಂಡ್ ನೀಡಲಾಗುತ್ತದೆ. ತರಬೇತಿಯು ಒಟ್ಟು 7ತಿಂಗಳ ಅವಧಿಯದ್ದಾಗಿರುತ್ತದೆ.

ಅರ್ಹತೆ : ಪಧವೀದರನಾಗಿರಬೇಕು, ಇಲಾಖೆಯು ನಡೆಸುವ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆ ಹೊಂದಬೇಕು, ವಾರ್ಷಿಕ ಆದಾಯ 4.5 ಲಕ್ಷ (ಪ್ರವರ್ಗ 1) ಮತ್ತು 3.5 ಲಕ್ಷ (ಇತರ) ಹೊಂದಿರಬೇಕು. 

ದಾಖಲೆಗಳು : ಎಸ್.ಎಸ್.ಎಲ್.ಸಿ ಅಂಕ ಪಟ್ಟಿ, ಜಾತಿ ಮತ್ತು ಅದಾಯ ಪ್ರಮಾಣ ಪತ್ರ, ವಾಸ್ತವ್ಯ ಪ್ರಮಾಣ ಪತ್ರ, ಎಲ್ಲಾ ಸೆಮೆಸ್ಟರ್ ಅಂಕ ಪಟ್ಟಿ, ಉತ್ತೀರ್ಣ ಪ್ರಮಾಣ ಪತ್ರ, ಅಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹೊಂದಿರಬೇಕು.

ಜು. 10 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ ಎಂದು ಮಸ್ಜಿದ್ ಒನ್ ಮೂವ್ ಮೆಂಟ್ ದಕ್ಷಿಣ ಕನ್ನಡ ಜಿಲ್ಲಾ ಚಾಪ್ಟರ್, ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಕೌನ್ಸಿಲ್ ಅಧ್ಯಕ್ಷ ಅಹ್ಮದ್ ಮುಹ್ಯುದ್ದೀನ್  ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News