×
Ad

ಸ್ಕೇಟಿಂಗ್: ಹಿಮರ್ಷಗೆ ಚಿನ್ನ, ಬೆಳ್ಳಿ, ಕಂಚು

Update: 2019-06-27 22:35 IST

ಉಡುಪಿ, ಜೂ.27: ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಷಿಯೇಷನ್ ವತಿಯಿಂದ ಮೈಸೂರಿನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಓಪನ್ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನ 7ರಿಂದ 9 ವರ್ಷದೊಳಗಿನವರ ಬಾಲಕಿಯರ ವಿಭಾಗದಲ್ಲಿ ಉಡುಪಿಯ ಹಿಮರ್ಷ ಒಂದು ಸ್ವರ್ಣ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆಲ್ಲುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.

ಸ್ಪರ್ಧೆಯಲ್ಲಿ 500 ಮೀ. ರೋಡ್‌ರೇಸ್‌ನಲ್ಲಿ ಚಿನ್ನ, 500 ಮೀ.ರಿಂಕ್ ರೇಸ್ ನಲ್ಲಿ ಕಂಚು ಹಾಗೂ 1000 ಮೀ ರಿಂಕ್ ರೇಸ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.

ಉಡುಪಿ ಸೈಂಟ್ ಸಿಸಿಲಿ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿಯಾದ ಹಿಮರ್ಷ ಉಡುಪಿ ಆರೋಗ್ಯ ಇಲಾಖೆಯ ಸಿಬ್ಬಂದಿ ಸೆಲ್ವರಾಜ್ ಅವರ ಪುತ್ರಿ. ಅಜ್ಜರಕಾಡು ಉಪಾಧ್ಯಾಯ ಸ್ಕೇಟಿಂಗ್ ಕ್ಲಬ್ ಸದಸ್ಯೆಯಾದ ಇವರು ಅಂಬಲಪಾಡಿಯ ಲಕ್ಷ್ಮೀನಾರಾಯಣ ಉಪಾಧ್ಯಾಯರಿಂದ ತರಬೇತಿ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News