ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ: ಮುಂದುವರಿದ ವಿಚಾರಣೆ
ಉಡುಪಿ, ಜೂ.27: ಉದ್ಯಮಿ ಭಾಸ್ಕರ ಶೆಟ್ಟಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯುತ್ತಿರುವ ಸಾಕ್ಷಿಗಳ ವಿಚಾರಣೆ ಇಂದು ಮುಂದುವರಿದ್ದು, ನಾಳೆ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳ ವಿಚಾರಣೆ ನಡೆಯಲಿದೆ.
ಬುಧವಾರ ಸಿಐಡಿ ಇನ್ಸ್‌ಪೆಕ್ಟರ್ ಕಿರಣ್,ಅನೈತಿಕ ಸಂಬಂಧ ಹೊಂದಿದ್ದರೆಂದು ಆರೋಪಕ್ಕೆ ಗುರಿಯಾಗಿದ್ದ, ವಿದೇಶದಲ್ಲಿ ಉದ್ಯೋಗದಲ್ಲಿದ್ದ ಮಹಿಳೆ ಹಾಗೂ ಹೊಟೇಲ್‌ನ ಭದ್ರತಾ ಸಿಬಂದಿಯ ವಿಚಾರಣೆ ಮತ್ತು ಪಾಟಿಸವಾಲು ನಡೆಯಿತು. ಅಲ್ಲದೆ ಕೊಲೆಗೂ ಮುನ್ನ ಭಾಸ್ಕರ ಶೆಟ್ಟಿ ಮತ್ತು ಅವರ ಪತ್ನಿ ಪ್ರಧಾನ ಆರೋಪಿ ರಾಜೇಶ್ವರಿ ಶೆಟ್ಟಿ ನಡುವೆ ವೈಮನಸ್ಸು ಉಂಟಾಗಿ ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಪೊಲೀಸ್ ಅಧಿಕಾರಿಯನ್ನು ವಿಚಾರಣೆಗೊಳಪಡಿ ಸಲಾಯಿತು.
ಮುಖ್ಯ ವಿಚಾರಣೆಯನ್ನು ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕ, ಹಿರಿಯ ನ್ಯಾಯವಾದಿ ಶಾಂತಾರಾಮ ಶೆಟ್ಟಿ ನಡೆಸಿದರು. ನ್ಯಾಯವಾದಿಗಳಾದ ಅರುಣ್ ಬಂಗೇರ ಮತ್ತು ವಿಕ್ರಂ ಹೆಗ್ಡೆ ಪಾಟಿಸವಾಲಿಗೆ ಒಳಪಡಿಸಿದರು.
ಜಾಮೀನಿನಲ್ಲಿ ಬಿಡುಗಡೆಗೊಂಡಿರುವ ರಾಜೇಶ್ವರಿ ಶೆಟ್ಟಿ ಹಾಗೂ ಚಾಲಕ ರಾಘವೇಂದ್ರ ವಿಚಾರಣೆ ವೇಳೆ ಹಾಜರಿದ್ದರು. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಆರೋಪಿಗಳಾದ ಭಾಸ್ಕರ ಶೆಟ್ಟಿ ಅವರ ಪುತ್ರ ನವನೀತ ಶೆಟ್ಟಿ ಮತ್ತು ಜ್ಯೋತಿಷಿ ನಿರಂಜನ ಭಟ್‌ನನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು.
ಜಾಮೀನಿನಲ್ಲಿ ಬಿಡುಗಡೆಗೊಂಡಿರುವ ರಾಜೇಶ್ವರಿ ಶೆಟ್ಟಿ ಹಾಗೂ ಚಾಲಕ ರಾಘವೇಂದ್ರ ವಿಚಾರಣೆ ವೇಳೆ ಹಾಜರಿದ್ದರು. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಆರೋಪಿಗಳಾದ ಾಸ್ಕರಶೆಟ್ಟಿಅವರಪುತ್ರನವನೀತಶೆಟ್ಟಿಮತ್ತುಜ್ಯೋತಿಷಿನಿರಂಜನಟ್‌ನನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು. ಪ್ರಕರಣದ ಮುಖ್ಯ ತನಿಖಾಧಿಕಾರಿಯಾಗಿದ್ದು ಪ್ರಸ್ತುತ ಕೊಡಗು ಎಸ್ಪಿಯಾಗಿರುವ ಸುಮನಾ ಹಾಗೂ ಸಿಐಡಿ ಅಧಿಕಾರಿ ಚಂದ್ರಶೇಖರ್ ಅವರ ವಿಚಾರಣೆ ನಾಳೆ ನಡೆಯಲಿದೆ ಎಂದು ತಿಳಿದುಬಂದಿದೆ.