ರಂಗಭೂಮಿ ಸಾಮಾಜಿಕ ಪರಿವರ್ತನೆಗೆ ಕಾರಣವಾಗಬಲ್ಲ ಪರಿಣಾಮಕಾರಿ ಮಾಧ್ಯಮ-ರಾಘವೇಂದ್ರ ನಾಯ್ಕ
ಭಟ್ಕಳ: ಜೂ.27: ರಂಗಭುಮಿಯು ಸಾಮಾಜಿಕ ಪರಿವರ್ತನೆಗೆ ಕಾರಣವಾಗುವ ಸಾಧನ. ಅಭಿನಯ ಕಲೆಯ ಮೂಲಕ ವ್ಯಕ್ತಿಯ ನಿಜಜೀವನಕ್ಕೆ ಬೇಕಾದ ಸಂವಹನ ಕೌಶಲ, ಸಹಾನುಭೂತಿ, ಸಹಕಾರ, ಸಹಬಾಳ್ವೆ ಮುಂತಾದ ಕೌಶಲಗಳನ್ನು ಬೆಳೆಸಿಕೊಳ್ಳಲು ಪರಿಣಾಮಕಾರಿ ಎಂಬುದು ಪ್ರಯೋಗಾತ್ಮಕವಾಗಿಯೂ ಧ್ರಢಪಟ್ಟಿದೆ. ರಂಗಭೂಮಿ ಜನಜಾಗೃತಿ ಮೂಡಿಸುವ ಪರಿಣಾಮಕಾರಿ ಮಾಧ್ಯಮ ಎಂದು ಉದ್ಯಮಿ ರಾಘವೇಂದ್ರ ನಾಯ್ಕ ನುಡಿದರು.
ಅವರು ಇಲ್ಲಿನ ನ್ಯೂ ಇಂಗ್ಲೀಷ್ ಪ.ಪೂ.ಕಾಲೇಜಿನಲ್ಲಿ ಸಂಗಾತಿ ರಂಗಭೂಮಿ ಅಂಕೋಲ, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು, ನ್ಯೂ ಇಂಗ್ಲೀಷ್ ಪ.ಪೂ. ಕಾಲೇಜು,ಪ್ರಾರ್ಥನಾ ಪ್ರತಿಷ್ಠಾನ, ಪತ್ರಕರ್ತರ ಸಂಘದ ಸಹಯೋಗದಲ್ಲಿ ನಡೆದ ಸಿಜಿಕೆ ರಂಗ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ರಂಗಭುಮಿಯಲ್ಲಿ ತೊಡಗಿಸಿಕೊಂಡ ಹಿರಿಯ ರಂಗಕರ್ಮಿಗೆ ಸಿಜಿಕೆ ಬೀದಿ ರಂಗ ದಿನದ ಅಂಗವಾಗಿ ವರ್ಷಂಪ್ರತಿ ನೀಡುವ ಸಿಜಿಕೆ ರಂಗ ಪುರಸ್ಕಾರವನ್ನು ಹಿರಿಯ ರಂಗಕರ್ಮಿ ಅಶೋಕ ಮಹಾಲೆ ಅವರಿಗೆ ಪ್ರದಾನಮಾಡಲಾಯಿತು. ಇದೇ ಸಂದರ್ಬದಲ್ಲಿ ರಂಗಭೂಮಿಯಲ್ಲಿ ಅನೇಕ ವರ್ಷಗಳಿಂದ ತೊಡಗಿಸಿಕೊಂಡ ಕೆ.ಆರ್.ನಾಯ್ಕ, ಎಸ.ಎನ್.ದೇವಡಿಗ, ಗೋವಿಂದ ದೇವಡಿಗ, ರಾಮನಾಥ ಮಹಾಲೆ ಹಾಗೂ ನಜೀರ ಸಾಬ್ ಇವರುಗಳಿಗೆ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕಾಧ್ಯಕ್ಷ ಹಾಗೂ ಪ್ರಾರ್ಥನಾ ಪ್ರತಿಷ್ಠಾನದ ಮುಖ್ಯಸ್ಥ ಗಂಗಾಧರ ನಾಯ್ಕ ಮಾತನಾಡಿ ನಾಟಕಕ್ಕೆ ಎಲ್ಲ ವರ್ಗದವರನ್ನು ಸೆಳೆಯುವ ಶಕ್ತಿ ಇದೆ. ಆಸಕ್ತರಿಗೆ ಮುಂದಿನ ದಿನಗಳಲ್ಲಿ ರಂಗತರಬೇತಿಯನ್ನು ಎಲ್ಲರ ಸಹಕಾರ ಪಡೆದು ನೀಡುವ ಕೆಲಸವಾಗಬೇಕೆಂದು ನುಡಿದರು.
ನ್ಯೂ ಇಂಗ್ಲೀಷ್ ಪ.ಪೂ. ಕಾಲೇಜಿನ ಪ್ರಾಚಾರ್ಯ ವಿರೇಂದ್ರ ಶಾನಭಾಗ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್, ಪತ್ರಕರ್ತರ ಸಂಘದ ಅಧ್ಯಕ್ಷ ರಾಮಚಂದ್ರ ಕಿಣಿ ಮಾತನಾಡಿದರು. ಪ್ರಶಸ್ತಿ ಪುರಸ್ಕøತರಾದ ಅಶೋಕ ಮಹಾಲೆ ಹಾಗೂ ಕೆ.ಆರ್.ನಾಯ್ಕ ಸನ್ಮಾನಿತರ ಪರವಾಗಿ ಮಾತನಾಡಿದರು.
ಕು. ಶಾಹಿಲ್ ಪ್ರಾರ್ಥಿಸಿದರೆ ಕಸಾಪ ಗೌರವ ಕಾರ್ಯದರ್ಶೀ ಎಂ.ಪಿ.ಬಂಢಾರಿ ಸ್ವಾಗತಿದಿರು. ಸಂಗಾತಿ ರಂಗಭೂಮಿಯ ಕೆ.ರಮೇಶ್ ಪ್ರಾಸ್ಥಾವಿಕವಾಗಿ ಮಾತನಾಡಿದರು. ಕು.ಚಂದ್ರಪ್ರಭಾ ಕೊಡಿಯಾ ನಿರ್ವಹಿಸಿದರು.