×
Ad

ಜೂ. 29ರಂದು ರಾಜೀವ್ ಗಾಂಧಿ ವಿವಿಯ ಸಿಂಡಿಕೇಟ್ ಸಭೆ

Update: 2019-06-28 17:10 IST
ಪ್ರೊ. ಯು.ಟಿ. ಇಫ್ತಿಕಾರ್ ಅಲಿ

ಮಂಗಳೂರು, ಜೂ. 28: ರಾಜೀವ್ ಗಾಂದಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ 142ನೆ ಸಿಂಡಿಕೇಟ್ ಸಭೆ ಮಂಗಳೂರಿನಲ್ಲಿ ಜೂ. 29ರಂದು ನಡೆಯಲಿದೆ.

ರಾಜೀವ್ ಗಾಂಧಿ ವಿವಿಯ ವೈಸ್ ಚಾನ್ಸೆಲರ್ ಡಾ. ಸಚ್ಚಿದಾನಂದ, ವೈದ್ಯಕೀಯ ಶಿಕ್ಷಣ ಉಪ ಕಾರ್ಯದರ್ಶಿ ಡಾ. ಚಂದ್ರಶೇಖರ್, ಆಯುಷ್ ಆಯುಕ್ತರಾದ ಮೀನಾಕ್ಷಿ ನೇಗಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶಕರಾದ ಡಾ. ಟಿ.ಎಸ್.ಪ್ರಭಾಕರ್, ರಾಜೀವ್ ಗಾಂಧಿ ವಿವಿಯ ರಿಜಿಸ್ಟ್ರಾರ್ ಶಿವಾನಂದ ಕಪಶಿ, ಮೌಲ್ಯಮಾಪನ ರಿಜಿಸ್ಟ್ರಾರ್ ಡಾ.ಕೆ.ಬಿ. ಲಿಂಗೇಗೌಡ ಹಾಗೂ ಇತರ ಎಲ್ಲಾ ಸಿಂಡಿಕೇಟ್ ಸದಸ್ಯರಾದ ಡಾ. ಜಿ.ಆರ್. ಚಂದ್ರಶೇಖರ್, ಡಾ. ಭಗವಾನ್ ಬಿ.ಸಿ., ಡಾ. ಕಿರಣ್ ಕುಮಾರ್, ಡಾ. ಉಮೇಶ್ ಬಾಬು, ಡಾ. ರವಿಶಂಕರ್ ಶೆಟ್ಟಿ, ಡಾ. ರವೀಂದ್ರ ಎಚ್.ಎನ್., ಡಾ. ಕಿರಣ್ ಕೈಲಾಶ್, ಡಾ. ವಿಜಯ ಕುಮಾರ್, ಡಾ.ಎಚ್.ಜೆ. ಜೈಕೃಷ್ಣ, ಡಾ. ದೀಪ್ತಿ ಬಾವಾ, ಡಾ. ಸುಧೀರ್ ಡಬ್ಲ್ಯೂ .ಆರ್., ಡಾ. ವಿ.ಟಿ. ವೆಂಕಟೇಶ್, ಡಾ. ಚಂದ್ರಶೇಖರ್ ಎಚ್.ಎಸ್., ಡಾ. ಎಚ್. ವೀರಭದ್ರಪ್ಪ, ಡಾ. ಅನ್ನಾದನಿ ಎಂ.ಮೇರಿ ಮತ್ತು ಡಾ. ಶರಣ್ ಶೆಟ್ಟಿ ಮತ್ತು ಪ್ರೊ. ಯು.ಟಿ. ಇಫ್ತಿಕಾರ್ ಅಲಿ ಭಾಗವಹಿಸಲಿದ್ದಾರೆ.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಸಿಂಡಿಕೇಟ್ ಸಭೆಯನ್ನು ನಡೆಸಲಾಗುತ್ತಿದೆ. ನಗರದ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಸಭೆ ಆರಂಭಗೊಳ್ಳಲಿದೆ.

- ರಾಜೀವ್ ಗಾಂಧಿ ವಿವಿಯ ಸಿಂಡಿಕೇಟ್ ಸದಸ್ಯ ಪ್ರೊ. ಯು.ಟಿ. ಇಫ್ತಿಕಾರ್ ಅಲಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News