ಕನ್ಯಾನ: ಖಾಸಗಿ ಬಸ್ - ಸ್ಕಾರ್ಪಿಯೋ ವಾಹನ ಮುಖಾಮುಖಿ ಢಿಕ್ಕಿ

Update: 2019-06-28 12:31 GMT

ಬಂಟ್ವಾಳ, ಜೂ. 28: ಖಾಸಗಿ ಬಸ್ ಹಾಗೂ ಸ್ಕಾರ್ಪಿಯೋ ವಾಹನ ಮುಖಾಮುಖಿ ಢಿಕ್ಕಿ ಹೊಡೆದ ಘಟನೆ ಕನ್ಯಾನ ಸಮೀಪದ ಗುಂಡಮಜಲು ಎಂಬಲ್ಲಿ ಶುಕ್ರವಾರ ಸಂಭವಿಸಿದೆ.

ಅಪಘಾತದ ರಭಸಕ್ಕೆ ಸ್ಕಾರ್ಪಿಯೋ ವಾಹನದ ಮುಂಭಾಗ ಸಂಪೂರ್ಣ ನಜ್ಜಗುಜ್ಜಾಗಿದ್ದು, ಬಸ್ಸಿನ ಮುಂದಿನ ಭಾಗಕ್ಕೂ ಹಾನಿಯಾಗಿದೆ. ಅದೃಷ್ಟವಶಾತ್ ವಾಹನದಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಕನ್ಯಾನ ಕಡೆಯಿಂದ ಆನೆಕಲ್ಲು ಕಡೆಗೆ ತೆರಳುತ್ತಿದ್ದ ಸ್ಕೋರ್ಪಿಯೊ ವಾಹನಕ್ಕೆ ಕನ್ಯಾನ ಕಡೆಗೆ ಬರುತ್ತಿದ್ದ ಬಸ್ ಢಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News