×
Ad

ಪಾದುವ ಕಾಲೇಜು: "ಮಾದಕ ದ್ರವ್ಯ ವಿರೋಧಿ ದಿನಾಚರಣೆ"

Update: 2019-06-28 18:07 IST

ಮಂಗಳೂರು: ಮಾದಕ ದ್ರವ್ಯ ಸೇವನೆಯಿಂದ ಇಡೀ  ಜೀವನವೇ ನಾಶವಾಗುತ್ತದೆ, ಯುವ ಪ್ರಾಯದಲ್ಲಿ ವಿಧ್ಯಾರ್ಥಿಗಳು ಇಂತಹ ಕೆಟ್ಟ ಚಟುವಟಿಕೆಗಳಿಗೆ ಬಲಿಯಾಗದೆ, ಸುಧೃಡ ಭವಿಷ್ಯ ರೂಪಿಸುವುದರ ಕಡೆಗೆ ಗಮನ ಕೊಡುವುದು ಅತೀ ಮುಖ್ಯ ಎಂದು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ 'ನ್ಯಾಕೋಟಿಕ್ ಆ್ಯನಾನಿಮಸ್' ಸಂಘಟನೆಯ ಸದಸ್ಯರಾದ ಗುರು ಅಭಿಪ್ರಾಯಪಟ್ಟರು. ಪಾದುವ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಇದರ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ 'ಮಾದಕ ದ್ರವ್ಯ ವಿರೋದಿ ದಿನಾಚರಣೆ'ಯನ್ನು ಆಚರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಫಾ. ಆಲ್ವಿನ್ ಸೆರಾವೊರವರು ಮಾದಕವಸ್ತುಗಳ ಸೇವನೆಯಿಂದ ವಿದ್ಯಾರ್ಥಿಗಳ ಮೇಲೆ ಆಗಬಹುದಾದ ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಮತ್ತೊಬ್ಬ ಸದಸ್ಯರಾದ ಶರುಣ್ ಇವರು ಮಾದಕ ವ್ಯಸನಗಳಿಗೆ ಬಲಿಯಾಗುವುದು ಸುಲಭದ ಕೆಲಸ, ಆದರೆ ಹೊರ ಬರುವುದು ಬಹಳ ಕಷ್ಟ, ಆದುದರಿಂದ ಶೋಕಿಗಾಗಿ ಆರಂಭಗೊಳ್ಳುವ ಈ ಕೆಟ್ಟ ಚಟಗಳು ನಂತರ ನಮ್ಮ‌ಜೀವನವನ್ನೇ ಬಲಿ ತೆಗೆದುಕೊಳ್ಳುತ್ತವೆ ಎಂದು ವಿಧ್ಯಾರ್ಥಿಗಳಿಗೆ ಕಿವಿ ಮಾತನ್ನಿತ್ತರು. 

ವಿದ್ಯಾರ್ಥಿ ರೊರ್ತನ್ ನೆರೆದ ಎಲ್ಲಾರಿಗೂ ಧನ್ಯವಾದಗಳನ್ನು ಸಮರ್ಪಿಸಿದರು. ವಿಧ್ಯಾರ್ಥಿ ಮನ್ವಿತ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News