ಕಲ್ಲಿದ್ದಲು ಆಮದು ಅವ್ಯವಹಾರ: ರಿಲಯನ್ಸ್ ಸಂಸ್ಥೆಗಳ ವಿರುದ್ಧ ತನಿಖೆಗೆ ಸಿಬಿಐಗೆ ಡಿಆರ್ ಐ ಸೂಚನೆ

Update: 2019-06-28 14:06 GMT

ಹೊಸದಿಲ್ಲಿ, ಜೂ.28: ಇಂಡೋನೇಷ್ಯಾದಿಂದ 2010 ಹಾಗೂ 2015ರ ನಡುವೆ  ಆಮದು ಮಾಡಲಾದ  ಕಲ್ಲಿದ್ದಲಿನ ಬೆಲೆಯನ್ನು ಹೆಚ್ಚು ತೋರಿಸಲಾಗಿದೆ ಎಂಬ ಆರೋಪ ಕುರಿತಂತೆ ರಿಲಯನ್ಸ್ ಒಡೆತನದ ಎರಡು ಸಂಸ್ಥೆಗಳ ವಿರುದ್ಧ ತನಿಖೆ ನಡೆಸುವಂತೆ  ಸಿಬಿಐಗೆ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‍ಐ)  ಸೂಚನೆ ನೀಡಿದೆ.

ಆಮದಿತ ಕಲ್ಲಿದ್ದಲಿನ ಕನಿಷ್ಠ 73 ಲೋಡುಗಳಿಗೆ ಸಂಬಂಧಿಸಿದಂತೆ ಸುಮಾರು ರೂ 386 ಕೋಟಿಯಷ್ಟು ಹಣವನ್ನು ಕೊಳ್ಳೆ ಹೊಡೆದಿವೆಯೆನ್ನಲಾದ ರಿಲಯನ್ಸ್ ಇನ್‍ಫ್ರಾಸ್ಟ್ರಕ್ಷರ್ ಲಿ. ಹಾಗೂ ರೋಸಾ ಪವರ್ ಸಪ್ಲೈ ಕೋ. ಲಿ. ಎಂಬ ಎರಡು ಸಂಸ್ಥೆಗಳ ವಿರುದ್ಧ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಸೆಂಬರ್ 21, 2018ರಂದು ಬರೆದ ಪತ್ರದಲ್ಲಿ  ಸಿಬಿಐಗೆ ಡಿಆರ್‍ಐ ಸೂಚಿಸಿದೆ.

ಈ ಕುರಿತಂತೆ ಸಿಬಿಐ ಇನ್ನೂ ಆರಂಭಿಕ ತನಿಖೆ  ನಡೆಸದೇ ಇದ್ದರೂ  ಐಪಿಸಿ  ಉಲ್ಲಂಘನೆ ಪ್ರಕರಣಗಳನ್ನು ಅದು ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.

ಆಮದಿತ ಕಲ್ಲಿದ್ದಲನ್ನು ರಿಲಯನ್ಸ್ ಇನ್‍ಫ್ರಾಸ್ಟ್ರಕ್ಚರ್ ನ ಮಹಾರಾಷ್ಟ್ರದಲ್ಲಿರುವ ಹಾಗೂ ಮುಂಬೈ ಉಪನಗರಿಗಳಿಗೆ ವಿದ್ಯುತ್ ಪೂರೈಸುವ  ದಹಾನು ವಿದ್ಯುತ್ ಉತ್ಪಾದನಾ ಘಟಕಕ್ಕೆ ಹಾಗೂ ಉತ್ತರ ಪ್ರದೇಶದ ರೋಸಾ ವಿದ್ಯುತ್ ಘಟಕಕ್ಕೆ  ಪೂರೈಸಲಾಗಿದೆ.

ರಿಲಯನ್ಸ್ ಇನ್‍ಫ್ರಾಸ್ಟ್ರಕ್ಚರ್ ಹಾಗೂ ರೋಸಾ ಪವರ್ ಪ್ಲ್ಯಾಂಟ್ ಗೆ ಡಿಆರ್‍ಐ ಆಗಸ್ಟ್ 2016ರಲ್ಲಿಯೇ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News