×
Ad

ಸಹಬಾಳ್ವೆಯ ವಾತಾವರಣ ಸೃಷ್ಠಿ ಇಂದಿನ ಅಗತ್ಯ: ಸೊರಕೆ

Update: 2019-06-28 20:48 IST

ಉಡುಪಿ, ಜೂ.28: ಉಡುಪಿ ಸೌಹಾರ್ದತೆಗೆ ಒತ್ತು ಕೊಡುವ ಜಿಲ್ಲೆ ಯಾಗಿದ್ದು, ಇಲ್ಲಿ ಪರಸ್ಪರ ಸಹಬಾಳ್ವೆಯ ವಾತಾವರಣವನ್ನು ಸೃಷ್ಠಿ ಮಾಡ ಬೇಕಾಗಿರುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಮಾಜಿ ಸಚಿವ ವಿಯ ಕುಮಾರ್ ಸೊರಕೆ ಹೇಳಿದ್ದಾರೆ.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಉಡುಪಿ ಅಮ್ಮಣ್ಣಿ ರಾಮಣ್ಣ ಸಭಾಭವನದಲ್ಲಿ ಗುರುವಾರ ಆಯೋಜಿಸಲಾದ ಈದ್ ಸ್ನೇಹ ಮಿಲನ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.

ದಲಿತ ಮುಖಂಡ ಶ್ಯಾಮ್‌ರಾಜ್ ಬಿರ್ತಿ ಮಾತನಾಡಿ, ಈ ದೇಶದಲ್ಲಿ ಇಂದು ದಲಿತರ ಮೇಲಿನ ದೌರ್ಜನ್ಯಗಳು, ಗುಂಪು ಹತ್ಯೆಗಳು ಹೆಚ್ಚಾಗುತ್ತಿವೆ. ಇದೇ ರೀತಿ ಮುಂದುವರೆದರೆ ದೇಶ ವಿಭಜನೆ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲ. ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಗಾಂಧೀಜಿಯನ್ನು ಇಂದು ದೇಶದ್ರೋಹಿ ಎಂಬುದಾಗಿ ಬಿಂಬಿಸಲಾಗುತ್ತಿದೆ ಎಂದರು.

ಇಂದಿನ ಮಕ್ಕಳ ಮನಸ್ಸಿಗೆ ಸುಳ್ಳು ಹೇಳುವ ಹಾಗೂ ಧ್ವೇಷವನ್ನು ಹರಡಿಸುವ ಕೆಲಸ ಮಾಡಲಾಗುತ್ತಿದೆ. ಈ ರೀತಿಯ ವಾತಾವರಣದಲ್ಲಿ ದೇಶದಲ್ಲಿರುವ ಯಾವುದೇ ಧರ್ಮದ ವ್ಯಕ್ತಿಯ ಮೇಲೆ ಹಲ್ಲೆ ನಡೆದರೂ ನಾವೆಲ್ಲ ಒಗ್ಗಟ್ಟಾಗಿ ಖಂಡಿಸುವ ಪ್ರವೃತ್ತಿ ಬೆಳೆಯಬೇಕು. ಆಗ ಮಾತ್ರ ಸೌಹಾರ್ದತೆ ಹಾಗೂ ಶಾಂತಿಯ ನಾಡನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಮಾಜಿ ಶಾಸಕ ಗೋಪಾಲ ಭಂಡಾರಿ ಮಾತನಾಡಿ, ಇಂದು ಸಮಾಜದಲ್ಲಿ ಸೌಹಾರ್ದತೆ, ನಂಬಿಕೆಯ ಕೊರತೆ ಎದ್ದು ಕಾಣುತ್ತಿದೆ. ಜಾತಿ, ಧರ್ಮದ ಹೆಸರಿ ನಲ್ಲಿ ಪರಸ್ಪರ ಅಪನಂಬಿಕೆ ಹಾಗೂ ವಿಭಜಿಸುವ ಕೆಲಸ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸೌಹಾರ್ದತೆ ಇಂದಿನ ಅತಿ ಅವಶ್ಯಕತೆ ಆಗಿದೆ. ಎಲ್ಲ ಧರ್ಮಗಳ ಸಂದೇಶ ಒಂದೇ ಆಗಿದೆ. ಅದನ್ನು ಎಲ್ಲರು ಅರ್ಥ ಮಾಡಿಕೊಳ್ಳಬೇಕು ಎಂದರು.

ಬಿ.ಎಸ್.ಸರ್ಫುದ್ದೀನ್ ಬನಕಲ್ ಸಮಾರೋಪ ಭಾಷಣ ಮಾಡಿ, ರಾಷ್ಟ್ರದ ಭಾವನೆ ಎಂಬುದು ಧರ್ಮದ ಆಧಾರದಲ್ಲಿ ಧ್ರುವೀಕರಣ ಮಾಡುವುದಲ್ಲ. ಬದಲಾಗಿ ರಾಷ್ಟ್ರಕ್ಕೆ ಆಗುವ ಅನ್ಯಾಯವನ್ನು ತಡೆಯುವುದಾಗಿದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ಸುಂದರವಾದ ಭಾರತವನ್ನು ಕಾಣಲು ಸಾಧ್ಯವಿಲ್ಲ. ಆದುದರಿಂದ ಸಮಾಜದಲ್ಲಿ ಸೌಹಾರ್ದ ನಿರ್ಮಿಸುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ ಎಂದು ಅಭಿಪ್ರಾಯ ಪಟ್ಟರು.

ಈ ದೇಶಕ್ಕೆ ಹಿಂದೂ, ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ಸೇರಿದಂತೆ ಎಲ್ಲ ಧರ್ಮದವರು ಕೂಡ ಬಹಳಷ್ಟು ಕೊಡುಗೆ ನೀಡಿದ್ದಾರೆ. ಧರ್ಮಗಳ ನಡುವಿನ ಧ್ವೇಷದಿಂದ ಸಮಾಜ ಮೇಲೆ ನಕರಾತ್ಮಕ ಪರಿಣಾಮ ಬೀರಿ ಅಭಿವೃದ್ಧಿ ಕುಠಿತ ವಾದರೆ, ಧರ್ಮದ ಪಾಲನೆಯಿಂದ ಸಮಾಜದ ಪ್ರಗತಿ ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಉಡುಪಿ ಬಂಟರ ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ತಾಪಂ ಮಾಜಿ ಅಧ್ಯಕ್ಷೆ ವರೋನಿಕಾ ಕರ್ನೆಲಿಯೋ, ಮನೋ ತಜ್ಞ ಡಾ.ಪಿ.ವಿ. ಭಂಡಾರಿ, ದಂಡತೀರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಆಲ್ಬನ್ ರೊಡ್ರಿ ಗಸ್, ಡಾ.ಕರುಣಾಕರನ್, ತಾರಾ ಆಚಾರ್ಯ, ಆರೂರು ತಿಮ್ಮಪ್ಪ ಶೆಟ್ಟಿ, ಜೇಸಿ ರಾಷ್ಟ್ರೀಯ ತರಬೇತುದಾರ ಇನ್ನಾ ಉದಯ ಶೆಟ್ಟಿ, ಧರ್ಮಗುರು ವಿಲಿಯಂ ಮಾರ್ಟಿಸ್ ಮಾತನಾಡಿದರು.

ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ವೌಲಾ ಸ್ವಾಗತಿಸಿದರು. ಜಿಲ್ಲಾ ಸಮಿತಿ ಸದಸ್ಯ ಝಮೀರ್ ಅಹ್ಮದ್ ರಶದಿ ಕುರಾಆನ್ ಪಠಿಸಿದರು.

ಸಂಘಟನಾ ಕಾರ್ಯದರ್ಶಿ ಇಸ್ಮಾಯಿಲ್ ಹುಸೇನ್ ಕಟಪಾಡಿ ವಂದಿಸಿದರು. ಕಾರ್ಯಕ್ರಮದ ಸಂಚಾಲಕ ಅಬ್ದುಲ್ ಅಝೀಝ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News