ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಬೇಡಿ, ಅಧ್ಯಕ್ಷರೇ: ಪುಟಿನ್‌ಗೆ ಹೇಳಿದ ಟ್ರಂಪ್!

Update: 2019-06-28 16:21 GMT

ಒಸಾಕ (ಜಪಾನ್), ಜೂ. 28: ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಲು ರಶ್ಯ ಸಹಾಯ ಮಾಡಿದೆ ಎಂಬ ಆರೋಪ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಂದಿನಿಂದಲೂ ಅವರನ್ನು ಕಾಡುತ್ತಿದೆ. ಈ ಬಗ್ಗೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರನ್ನು ಪ್ರಶ್ನಿಸುವ ಸಮಯ ಬಂದಾಗ ಅವರು ಅದನ್ನು ಹಾಸ್ಯಶೈಲಿಯಲ್ಲಿ ಕೇಳಿದರು.

‘‘ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಬೇಡಿ, ಅಧ್ಯಕ್ಷರೇ, ಹಸ್ತಕ್ಷೇಪ ಮಾಡಬೇಡಿ’’ ಎಂದು ಟ್ರಂಪ್ ಮುಗುಳು ನಗುತ್ತಾ ರಶ್ಯ ಅಧ್ಯಕ್ಷರನ್ನು ಉದ್ದೇಶಿಸಿ ಹೇಳಿದರು.

ಒಸಾಕದಲ್ಲಿ ಶುಕ್ರವಾರ ಜಿ20 ಶೃಂಗ ಸಮ್ಮೇಳನದ ನೇಪಥ್ಯದಲ್ಲಿ ನಡೆದ ಮಾತುಕತೆಯ ವೇಳೆ ಟ್ರಂಪ್ ಈ ಸನ್ನಿವೇಶವೊಂದನ್ನು ಸೃಷ್ಟಿಸಿದರು.

ಪುಟಿನ್ ಇದಕ್ಕೆ ಏನೂ ಹೇಳಲಿಲ್ಲ. ಆದರೆ, ಮುಗುಳ್ನಕ್ಕರು.

ಕಳೆದ ವರ್ಷ ಹೆಲ್ಸಿಂಕಿಯಲ್ಲಿ ನಡೆದ ಭೇಟಿಯ ಬಳಿಕ, ಉಭಯ ನಾಯಕರು ಮುಖಾಮುಖಿ ಭೇಟಿಯಾಗುತ್ತಿರುವುದು ಇದೇ ಮೊದಲು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News