ಭಾರತದ ಹಜ್ ಕೋಟಾ 30,000 ಏರಿಕೆ: ಸೌದಿ ಯುವರಾಜರಿಂದ ಮೋದಿಗೆ ಭರವಸೆ

Update: 2019-06-28 16:30 GMT

ಒಸಾಕ (ಜಪಾನ್), ಜೂ. 28: ಸೌದಿ ಅರೇಬಿಯವು ಭಾರತದ ಹಜ್ ಕೋಟಾವನ್ನು 30,000 ದಷ್ಟು ಹೆಚ್ಚಿಸಿದೆ. ಅಂದರೆ, ಮಕ್ಕಾದ ವಾರ್ಷಿಕ ಯಾತ್ರೆ ಕೈಗೊಳ್ಳುವ ಭಾರತೀಯರ ಸಂಖ್ಯೆ 1,70,000ದಿಂದ 2,00,000ಕ್ಕೆ ಏರಲಿದೆ.

ಇಲ್ಲಿ ನಡೆಯುತ್ತಿರುವ ಜಿ20 ಶೃಂಗ ಸಮ್ಮೇಳನದ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ನಡುವೆ ನಡೆದ ಮಾತುಕತೆಯ ವೇಳೆ ಹಜ್ ಕೋಟದ ಬಗ್ಗೆ ಚರ್ಚೆ ನಡೆಯಿತು.

ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶ ಕಾರ್ಯದರ್ಶಿ ವಿಜಯ ಗೋಖಲೆ, ಭಾರತದ ವಾರ್ಷಿಕ ಹಜ್ ಕೋಟವನ್ನು 1,70,000ದಿಂದ 2,00,000ಕ್ಕೆ ಏರಿಸುವ ಭರವಸೆಯನ್ನು ಸೌದಿ ಅರೇಬಿಯದ ಯುವರಾಜರು ಪ್ರಧಾನಿ ಮೋದಿಗೆ ನೀಡಿದರು ಎಂದು ಹೇಳಿದರು.

ಹೆಚ್ಚಿನ ಪ್ರವಾಸೋದ್ಯಮ ಮತ್ತು ಹೆಚ್ಚು ವಿಮಾನಗಳ ಬಗ್ಗೆಯೂ ಉಭಯ ನಾಯಕರು ಚರ್ಚಿಸಿದರು ಹಾಗೂ ಇನ್ನೊಮ್ಮೆ ಭೇಟಿಯಾಗಲು ಒಪ್ಪಿದರು ಎಂದು ವಿದೇಶ ಕಾರ್ಯದರ್ಶಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News