ಮಾಜಿ ಸೈನಿಕರ ಪಿಂಚಣಿ ಪರಿಷ್ಕರಣೆ
Update: 2019-06-28 22:10 IST
ಉಡುಪಿ, ಜೂ.28: ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 2016 ರ ಮೊದಲು ಪಿಂಚಣಿದಾರರಾದ ಮಾಜಿ ಸೈನಿಕರ ಹಾಗೂ ಕುಟುಂಬ ಪಿಂಚಣಿದಾರ ಪಿಂಚಣಿಯನ್ನು 7ನೇ ವೇತನ ಆಯೋಗದ ಸೂಚನೆುಂತೆ ಮತ್ತೆ ಪರಿಷ್ಕರಿಸಲಾಗುತ್ತಿದೆ.
ಪಿಂಚಣಿ ಪರಿಷ್ಕರಣೆಗಾಗಿ ಸಂಬಂಂಧಿಸಿದ ಅಭಿಲೇಖ ಕಾರ್ಯಾಲಯಗಳಿಗೆ ಸಲ್ಲಿಸಬೇಕಾದ ಅರ್ಜಿ ನಮೂನೆಯನ್ನು ಅವರ ಕಚೇರಿಯಿಂದ ಪಡೆಯಬಹುದು ಎಂದು ಜಂಟಿ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಮಂಗಳೂರು ಇವರು ಸೂಚಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.