×
Ad

‘ಮಿಸ್ ಯುನಿವರ್ಸ್ ಆಸ್ಟ್ರೇಲಿಯಾ’ ಕಿರೀಟ ಮುಡಿಗೇರಿಸಿದ ಬೆಳ್ಮಣ್ಣು ಮೂಲದ ಪ್ರಿಯಾ ಸೆರಾವೋ

Update: 2019-06-28 22:19 IST

ಕಾರ್ಕಳದ ಬೆಳ್ಮಣ್ಣು ಮೂಲದ, ಸದ್ಯ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಪ್ರಿಯಾ ಸೆರಾವೋ ಈ ಬಾರಿಯ ‘ಮಿಸ್ ಯುನಿವರ್ಸ್ ಆಸ್ಟ್ರೇಲಿಯಾ’ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.

ಜಗತ್ತಿನಾದ್ಯಂತದ ದೇಶಗಳ 26 ಸ್ಪರ್ಧಿಗಳನ್ನು ಹಿಂದಿಕ್ಕಿದ ಅವರು ವಿಜಯಿಯಾಗಿ ಹೊರಹೊಮ್ಮಿದರು.

ಕಾನೂನು ಪದವೀಧರೆಯಾಗಿರುವ ಪ್ರಿಯಾ ಸೆರಾವೋ ಮೆಲ್ಬೋರ್ನ್ ನಲ್ಲಿ ಉದ್ಯೋಗದಲ್ಲಿದ್ದಾರೆ. ಕಾರ್ಕಳದ ಬೆಳ್ಮಣ್ಣುವಿನಲ್ಲಿ ಜನಿಸಿದ ಇವರು ಕುಟುಂಬದ ಜೊತೆ ನಂತರ ಒಮಾನ್ ಮತ್ತು ದುಬೈಗೆ ತೆರಳಿದರು. ಅಲ್ಲೇ ಬಾಲ್ಯವನ್ನು ಕಳೆದ ನಂತರ ಅಲ್ಲಿಂದ ಆಸ್ಟ್ರೇಲಿಯಾಕ್ಕೆ ತೆರಳಿ ಅಲ್ಲೇ ನೆಲೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News