ಸಮುದ್ರದಲ್ಲಿ ಮುಳುಗುತ್ತಿದ್ದ ವ್ಯಕ್ತಿಯ ರಕ್ಷಣೆ
ಭಟ್ಕಳ : ಸಮುದ್ರದ ಅಪಾಯಕಾರಿ ಸ್ಥಳದಲ್ಲಿ ನಿಂತು ಫೋಟೊ ತೆಗೆದುಕೊಳ್ಳಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದ ಘಟನೆ ಗುರುವಾರ ಮುರುಡೇಶ್ವರದ ಕಡಲ ತೀರದಲ್ಲಿ ನಡೆದಿದೆ. ಅದೃಷ್ಟವಶಾತ್ ಲೈಫ್ ಗಾರ್ಡ್ ಹಾಗೂ ಸ್ಥಳೀಯರ ಸಹಾಯದಿಂದ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದಾರೆ.
ಸಾವಿನ ದವಡೆಯಿಂದ ಪಾರಾದ ವ್ಯಕ್ತಿಯನ್ನು ಮೈಸೂರು ನಿವಾಸಿ ಅನಿಲ ಕುಮಾರ ಎಸ್. ಶಂಕರಪ್ಪ ಗೌಡ ಸಎಂದು ತಿಳಿದು ಬಂದಿದ್ದು, ಈತ ತನ್ನ ನಾಲ್ಕು ಮಂದಿ ಗೆಳೆಯರೊಂದಿಗೆ ಗೋವಾದಿಂದ ಮುರ್ಡೇಶ್ವರಕ್ಕೆ ಬಂದಿದ್ದರು ಎಂದು ಹೇಳಲಾಗುತ್ತಿದೆ.
ಹೋಟೆಲನಿಂದ ಚೆಕ್ ಔಟ್ ಮಾಡಿ ಹೊರಗಡೆ ಬಂದು ಅವರ ಗುಂಪಿನಲ್ಲಿರುವ ಹತ್ತಿರ ಫೋಟೋ ತೆಗೆಯಲು ಹೇಳಿ ಮೆಟ್ಟಿಲು ಹತ್ತುವಾಗ ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ನೀರಿನ ಸೆಳವಿಗೆ ಸಿಲುಕಿಕೊಂಡಿದ್ದ. ತಕ್ಷಣ ಸ್ಥಳದಲ್ಲಿದ್ದವರು ಅಲ್ಲಿಯೇ ಇದ್ದ ಲೈಫ್ ಗಾರ್ಡ್ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರು.ತಕ್ಷಣ ವಿಷಯ ತಿಳಿದ ಅಲ್ಲಿನ ಜೀವ ರಕ್ಷಕ ಸಿಬ್ಬಂದಿಗಳು ಅನೀಲಕುಮಾರ್ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.
ರಕ್ಷಣೆ ಮಾಡಿದ ಲೈಪ್ ಗಾರ್ಢ ಸಿಬ್ಬಂದಿಗಳಾದ ಚಂದ್ರಶೇಖರ ಹರಿಕಾಂತ,ಸ್ಥಳೀಯ ಮೀನುಗಾರ ಲೋಕೇಶ್ ಹರಿಕಾಂತ, ಕಟ್ಟಡ ಕಾರ್ಮಿಕ ಕೃಷ್ಣ ನಾಯ್ಕ ಬೆಳಕೆ ಕಾರ್ಯಚರಣೆ ಯಲ್ಲಿ ಉಪಸ್ಥಿತರಿದ್ದರು.