ಮಲಚರಂಡಿ ಸ್ವಚ್ಛತೆಗಿಳಿದ ಮೂವರು ಕಾರ್ಮಿಕರು ಮೃತ್ಯು

Update: 2019-06-28 17:25 GMT

ಕೊಯಂಬತ್ತೂರು, ಜೂ.28: ಹಂದಿ ಸಾಕಾಣಿಕೆ ಕೇಂದ್ರದಲ್ಲಿದ್ದ ಮಲಚರಂಡಿಯನ್ನು ಸ್ವಚ್ಛಗೊಳಿಸಲು ಇಳಿದ ಮೂವರು ಕಾರ್ಮಿಕರು ಸಾವನ್ನಪ್ಪಿದ ಘಟನೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದಿದೆ.

 ಮೃತ ಕಾರ್ಮಿಕರನ್ನು ವೆಡಿಯಪ್ಪನ್, ಇನ್ನೋರ್ವರನ್ನು ರಾಜಪ್ಪನ್ ಎಂದು ಗುರುತಿಸಲಾಗಿದೆ. ಮಾಧ್ಯಮಗಳ ವರದಿ ಪ್ರಕಾರ, ಕೊಯಂಬತ್ತೂರಿನಲ್ಲಿರುವ ಹಂದಿ ಸಾಕಾಣಿಕೆ ಕೇಂದ್ರದ ಮಲಚರಂಡಿಯನ್ನು ಸ್ವಚ್ಛಗೊಳಿಸಲು ಮೂವರು ಕಾರ್ಮಿಕರು ತೆರಳಿದ್ದರು. ಈ ಫಾರ್ಮ್‌ನಲ್ಲಿ 30 ಹಂದಿಗಳಿದ್ದು ಚರಂಡಿಯು ಅವುಗಳ ಮಲದಿಂದ ತುಂಬಿ ಹೋಗಿತ್ತು. ಪೊಲೀಸರು ತಿಳಿಸಿರುವಂತೆ, ಮೊದಲಿಗೆ ರಾಜಪ್ಪನ್ ಮಲಚರಂಡಿಗೆ ಇಳಿದಿದ್ದರು. ಆದರೆ ಅದರೊಳಗೆ ವಿಷಾನಿಲ ಉಸಿರಾಡಿದ ಅವರು ಅಲ್ಲೇ ಸಾವನ್ನಪ್ಪಿದ್ದರು.

ರಾಜಪ್ಪನ್ ಚರಂಡಿಯಿಂದ ಹೊರಗೆ ಬಾರದಿರುವುದನ್ನು ಕಂಡು ಉಳಿದಿಬ್ಬರು ಚರಂಡಿಗೆ ಇಳಿದಾಗ ಅವರೂ ವಿಷಾನಿಲ ಸೇವಿಸಿ ಮೃತಪಟ್ಟಿದ್ದಾರೆ. ಮಲಚರಂಡಿಗಳನ್ನು ಮಾನವ ಕಾರ್ಮಿಕರಿಂದ ಸ್ವಚ್ಛಗೊಳಿಸುವುದನ್ನು ಕಾನೂನು ಪ್ರಕಾರ ನಿಷೇಧಿಸಲಾಗಿದ್ದರೂ ದೇಶಾದ್ಯಂತ ಈ ಪದ್ಧತಿ ಈಗಲೂ ಮುಂದುವರಿದಿದೆ. ಕೊಯಂಬತ್ತೂರಿನಲ್ಲಿ ಜನವರಿಯಲ್ಲಿ ಇಬ್ಬರು ಮಾನವಮಲ ಹೊರುವ ಕಾರ್ಮಿಕರು ಸಾವನ್ನಪ್ಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News