ಮೊಬೈಲ್ ಕಳವು ಪ್ರಕರಣ: ಆರೋಪಿ ಬಂಧನ
Update: 2019-06-28 22:58 IST
ಉಡುಪಿ, ಜೂ.28: ಮಂದಾರ್ತಿ ಒಳಮಕ್ಕಿ ಎಂಬಲ್ಲಿ 2018ರ ಎಪ್ರಿಲ್ ತಿಂಗಳಲ್ಲಿ ನಡೆದ ಮೊಬೈಲ್ ಕಳವು ಪ್ರಕರಣದ ಆರೋಪಿಯೊಬ್ಬನನ್ನು ಉಡುಪಿ ಡಿಸಿಐಬಿ ಪೊಲೀಸರು ಜೂ.27ರಂದು ಬಂಧಿಸಿದ್ದಾರೆ.
ಮಂದರ್ತಿ ಅರಿಕಲ್ ನಿವಾಸಿ ಶಂಕರ(26) ಬಂಧಿತ ಆರೋಪಿ. ರಾತ್ರಿ ವೇಳೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿಕೊಂಡು ಬಂದ ಈತ ಆಕೆಯ ಬಾಯಿ ಮುಚ್ಚಿ, ಅವಳ ಕೈಯಲ್ಲಿದ್ದ ಮೊಬೈಲ್ ಹಾಗೂ ಬ್ಯಾಗ್ ಕಸಿದುಕೊಂಡು, ಆೆಯನ್ನು ದೂಡಿಹಾಕಿ ಪರಾರಿಯಾಗಿದ್ದನು.
ಬಂಧಿತನಿಂದ ಕಳವುಗೈದ 6000 ರೂ. ಮೌಲ್ಯದ ಮೈಕ್ರೊಮ್ಯಾಕ್ಸ್ ಕಂಪೆನಿಯ ಮೊಬೈಲ್ ಫೋನ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಮತ್ತು ಸ್ವಾಧೀನಪಡಿಸಿಕೊಂಡ ಸೊತ್ತನ್ನು ಡಿಸಿಐಬಿ ಪೊಲೀಸರು ಬ್ರಹ್ಮಾವರ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
ಬ್ರಹ್ಮಾವರ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.