ಕ್ಯಾಂಪ್ಕೋ: ಕೇಂದ್ರ ಸಚಿವರ ಬಳಿ ನಿಯೋಗ
Update: 2019-06-28 23:12 IST
ಮಂಗಳೂರು, ಜೂ.28: ಅಡಿಕೆ ಮತ್ತು ಕಾಳುಮೆಣಸಿನ ಅಕ್ರಮ ಆಮದು ನಿಷೇಧ ಮತ್ತು ಸಹಕಾರ ವಲಯದ ಮೇಲೆ ವಿಧಿಸಲಾಗುತ್ತಿರುವ ಆದಾಯ ತೆರಿಗೆ ವಿಷಯವಾಗಿ ದ.ಕ. ಕ್ಯಾಂಪ್ಕೋ ನಿಯೋಗವು ನವದಿಲ್ಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಕೇಂದ್ರದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ರೈಲ್ವೆ ಸಚಿವ ಪಿಯೂಷ್ ಗೋಯಲ್, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ, ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಇಲಾಖೆ ಸಚಿವ ಪ್ರಹ್ಲಾದ್ ಜೋಷಿ, ವಿದೇಶಾಂಗ ಖಾತೆಯ ರಾಜ್ಯ ಸಚಿವ ವಿ.ಮುರಳೀಧರನ್ ಅವರನ್ನು ಸಂಸದರಾದ ನಳಿನ್‌ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ನಿರ್ದೇಶಕ ಚನಿಲ ತಿಮ್ಮಪ್ಪ ಶೆಟ್ಟಿ, ಕ್ರಾಂಪ್ಸ್ ಸಂಸ್ಥೆಯ ಮಂಜಪ್ಪ ಮತ್ತಿತರರ ನಿಯೋಗ ಭೇಟಿ ಮಾಡಿ, ಮನವಿ ಸಲ್ಲಿಸಲಾಯಿತು.