×
Ad

ಕುಡಿತ ಮತ್ತಿನಲ್ಲಿ ಬಸ್‌ಗೆ ಕಲ್ಲು ತೂರಾಟ: ಆರೋಪಿ ಸೆರೆ

Update: 2019-06-28 23:13 IST

ಮಂಗಳೂರು, ಜೂ.28: ಮದ್ಯ ಸೇವಿಸಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಬಸ್‌ಗೆ ಕಲ್ಲು ತೂರಿದ ಘಟನೆ ನಗರದ ಪಡೀಲ್ ಅಳಪೆ ಬಳಿ ಶುಕ್ರವಾರ ಸಂಜೆ ನಡೆಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಕಾರ್ಕಳ ತಾಲೂಕು ನಾರಾವಿಯ ಪ್ರಶಾಂತ್(35) ಬಂಧಿತ ಆರೋಪಿ.

ಈತ ನಾರಾವಿಯಿಂದ ಮಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದು, ಶುಕ್ರವಾರ ಸಂಜೆ ವಿಪರೀತ ಮದ್ಯಪಾನ ಸೇವಿಸಿದ್ದ. ಆತ 4 ಗಂಟೆ ವೇಳೆಗೆ ಎಲ್ಲಿಗೋ ಹೋಗಲು ಹೊರಟು ಅಳಪೆಯಲ್ಲಿ ಬಸ್‌ಗಳಿಗೆ ಕೈ ತೋರಿಸಿದ್ದನು. ಎರಡು- ಮೂರು ಬಸ್‌ಗಳು ಈತನ ವರ್ತನೆಯನ್ನು ಗಮನಿಸಿ ನಿಲ್ಲಿಸಿರಲಿಲ್ಲ. ಬಳಿಕ ಕೆಎಸ್ಸಾರ್ಟಿಸಿ ಬಸ್‌ವೊಂದು ಬಿ.ಸಿ.ರೋಡ್ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದಾಗ ಕಲ್ಲು ತೂರಾಟ ಮಾಡಿದ್ದ. ಕಲ್ಲೆಸೆತದಿಂದ ಬಸ್‌ನ ಗಾಜು ಪುಡಿಯಾಗಿದ್ದು, ಬಸ್ ಚಾಲಕ ಬಸ್‌ನ್ನು ಸ್ಥಳದಲ್ಲಿಯೇ ನಿಲ್ಲಿಸಿದ್ದರು. ಬಳಿಕ ಆರೋಪಿಯನ್ನು ಬಸ್ ಸಿಬ್ಬಂದಿ ಹಿಡಿದು ಕಂಕನಾಡಿ ಪೊಲೀಸ್ ಠಾಣೆಗೆ ಒಯ್ದರು.

ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದರು. ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ನ್ಯಾಯಾಧೀಶರು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News