×
Ad

ಮಂಗಳೂರು: ಇಸುಝು ಮೋಟರ್ಸ್ ಸರ್ವೀಸ್ ಸೆಂಟರ್ ಆರಂಭ

Update: 2019-06-28 23:42 IST

ಮಂಗಳೂರು, ಜೂ.28: ಅತ್ಯುತ್ತಮವಾದ ಸೇವೆ ಮತ್ತು ಗ್ರಾಹಕರಿಗೆ ಅನುಭವಕ್ಕೆ ಆದ್ಯತೆ ನೀಡುತ್ತಿರುವ ಇಸುಝು ಮೋಟರ್ಸ್ ಇಂಡಿಯಾ ಮಂಗಳೂರಿನಲ್ಲಿ ತನ್ನ ಹೊಸ ಪೂರ್ಣ ಪ್ರಮಾಣದ ಸರ್ವೀಸ್ ಸೆಂಟರನ್ನು ಆರಂಭಿಸಿದೆ.

ಈ ಸರ್ವೀಸ್ ಸೆಂಟರ್ 8,000 ಚದರಡಿ ವಿಸ್ತೀರ್ಣ ಹೊಂದಿದ್ದು, ಮಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಗ್ರಾಹಕರಿಗೆ ತಡೆರಹಿತವಾದ ಸೇವೆಗಳನ್ನು ಒದಗಿಸಲಿದೆ.

ನಗರದ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದ ಪ್ಲಾಟ್ ಸಂಖ್ಯೆ 1ರಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸರ್ವೀಸ್ ಸೆಂಟರ್‌ನಲ್ಲಿ ಅತ್ಯಾಧುನಿಕ ಉಪಕರಣಗಳು ಮತ್ತು ಇಸುಝುವಿನಿಂದ ತರಬೇತಿ ಪಡೆದ ತಾಂತ್ರಿಕ ವರ್ಗದ ಸಿಬ್ಬಂದಿ ಅತ್ಯುತ್ತಮ ದರ್ಜೆಯ ಸೇವೆಗಳನ್ನು ನೀಡಲಿದ್ದಾರೆ. ಕಾವೇರಿ ಇಸುಝು 2018ರಿಂದ ಮಂಗಳೂರಿನ ಬಾಂಗ್ರಾ ಕೂಳೂರು ರಾ.ಹೆದ್ದಾರಿ 66ರಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದೆ.

ಪತ್ರಿಕೆಯೊಂದಿಗೆ ಮಾತನಾಡಿದ ಸರ್ವೀಸ್ ಕಸ್ಟಮರ್ ರಿಲೇಶನ್ಸ್, ಎಕ್ಸ್‌ಟರ್ನಲ್ ಅಫೇರ್ಸ್‌ ಪಿಆರ್ ವಿಭಾಗದ ಉಪಾಧ್ಯಕ್ಷ ಕ್ಯಾಪ್ಟನ್ ಶಂಕರ್ ಶ್ರೀನಿವಾಸ್, ನಾವು ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗುವ ನಿಟ್ಟಿನಲ್ಲಿ ದೇಶಾದ್ಯಂತ ನಮ್ಮ ಸೇವೆಗಳನ್ನು ತ್ವರಿತಗೊಳಿಸುತ್ತಿದ್ದೇವೆ. ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳು ಮತ್ತು ಸೇವೆಗಳನ್ನು ನೀಡುವುದು ನಮ್ಮ ಧ್ಯೇಯವಾಗಿದ್ದು, ಅದರಂತೆ ನಡೆದುಕೊಳ್ಳುತ್ತಿದ್ದೇವೆ. ಇದಕ್ಕೆ ಪೂರಕವಾಗಿ ನಮ್ಮ ಬಲಯುತವಾದ ತಾಂತ್ರಿಕತೆಯು ಗ್ರಾಹಕರನ್ನು ಸಂತುಷ್ಟರನ್ನಾಗಿ ಮಾಡುವುದನ್ನು ಖಾತರಿಪಡಿಸಲಿದೆ. ಈ ದಿಸೆಯಲ್ಲಿ ನಾವು ಎಲ್ಲಾ ಗ್ರಾಹಕರಿಗೆ ನಮ್ಮ ಬದ್ಧತೆ ಮತ್ತು ಮೌಲ್ಯಯುತವಾದ ಸೇವೆಯನ್ನು ನೀಡುವುದನ್ನು ಮುಂದುವರಿಸಲಿದ್ದೇವೆ ಎಂದರು.

ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್

ಇಸುಜು ಡಿ-ಮ್ಯಾಕ್ಸ್ ವಿ-ಕ್ರಾಸ್ ಭಾರತದ ಮೊದಲ ಪ್ರಥಮ ಲೈಫ್‌ಸ್ಟೈಲ್ ಮತ್ತು ಅಡ್ವೆಂಚರ್ ಯುಟಿಲಿಟಿ ವಾಹನವಾಗಿದೆ. ಅಲ್ಲದೇ ಸಾಹಸವನ್ನು ಅರಸುವ ಮತ್ತು ಯಾವಾಗಲೂ ಮುಂಚೂಣಿಯಲ್ಲಿ ಪ್ರತ್ಯೇಕವಾಗಿ ಎದ್ದು ಕಾಣಿಸಿಕೊಳ್ಳಲು ಬಯಸುವವರಿಗೆ ಸೇವೆ ಸಲ್ಲಿಸುತ್ತದೆ. ಉನ್ನತ ಸಾಮರ್ಥ್ಯದ 4 ವೀಲ್ ಡ್ರೈವ್, ಆಧುನಿಕ ಎಸ್‌ಯುವಿ ವೈಶಿಷ್ಟ್ಯಗಳು ಮತ್ತು ಬೃಹತ್ ಡೆಕ್‌ನೊಂದಿಗೆ ವಿ-ಕ್ರಾಸ್ ಲಭ್ಯ. ಹೈ ಮತ್ತು ಸ್ಟ್ಯಾಂಡರ್ಡ್ ಗ್ರೇಡ್ ಮಾದರಿಗಳಲ್ಲಿ ಲಭ್ಯವಿರುವ ನೂತನ ವಿ-ಕ್ರಾಸ್, ಈಗ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್(ಇಎಸ್‌ಸಿ) ಜೊತೆಗೆ ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಮ್(ಟಿಸಿಎಸ್), ಆಟೊ ಕ್ರೂಸ್ ಕಂಟ್ರೋ, ಡೇ ಟೈಮ್ ರನ್ನಿಂಗ್ ಲ್ಯಾಂಪ್ಸ್(ಡಿಆರ್‌ಎಲ್), ಎಲ್‌ಇಡಿ ಹಿಂಭಾಗದ ಟೇಲ್ ಲೈಟ್ಸ್‌ಗಳು, ರೇರ್ ವ್ಯೆ ಕ್ಯಾಮರಾ, 2-ಡಿನ್ ಟಚ್‌ಸ್ಕ್ರೀನ್ ಮನರಂಜನಾ ವ್ಯವಸ್ಥೆ ಮತ್ತು ಸೈಡ್ ಸ್ಟೆಪ್‌ಗಳಂತಹ ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಲಭ್ಯವಿರುತ್ತದೆ.

ಇಸುಝು ಎಂಯು-ಎಕ್ಸ್

ಇಸುಝು ಎಂಯು-ಎಕ್ಸ್ ಪ್ರೀಮಿಯಮ್ 7 ಆಸನಗಳ ಪೂರ್ಣ ಗಾತ್ರದ ಎಸ್‌ಯುವಿ ಆಗಿದ್ದು, ಸಂಪೂರ್ಣ ಹೃದಯಕ್ಕೆ ಹಾಗೂ ಸಂಪೂರ್ಣ ಪ್ರದರ್ಶನಗಳೆರಡರಲ್ಲೂ ಅತ್ಯುತ್ತಮವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ. ಕೇವಲ ಶೈಲಿ ಅಲ್ಲದೆ, ಶಕ್ತಿ, ಗಮನಸೆಳೆಯುವಂತಹ ರಸ್ತೆಯಲ್ಲಿನ ಹಾಜರಿಯನ್ನು ಅಲ್ಲದೆ, ತನ್ನ ವರ್ಗದಲ್ಲಿ ಅತ್ಯುತ್ತಮ ಅನುಕೂಲವನ್ನು ತಮ್ಮ ಕುಟುಂಬಕ್ಕಾಗಿ ಅರಸುವ ಖರೀದಿದಾರರಿಗೆ ಇದು ಶ್ರೇಷ್ಠ ಮಿಶ್ರಣವಾಗಿದೆ. ನೂತನ ಎಂಯುಎಕ್ಸ್ ತಾಜಾತನ ತುಂಬಿದ ಹೊರಾಂಗಣ (ಮುಂಭಾಗ ಮತ್ತು ಹಿಂಭಾಗ), ಹೆಚ್ಚಿನ ಆಕ್ರಮಣಕಾರಿ ನಿಲುವು, ಪ್ರಮುಖ ಲಾವಾ ಬ್ಲಾಕ್ ಒಳಾಂಗಣ, ಆರು ಏರ್‌ಬ್ಯಾಗ್‌ಗಳು ಸೇರಿದಂತೆ ಹೆಚ್ಚುವರಿ ಸುರಕ್ಷ ವೈಶಿಷ್ಟ್ಯಗಳು, ಬೆಟ್ಟ ಇಳಿಯುವ ಸಂದರ್ಭದಲ್ಲಿ ನಿಯಂತ್ರಣ (ಎಚ್‌ಡಿಸಿ), 18 ಇಂಚು ಮಲ್ಟಿ ಸ್ಪೋಕ್ ಟ್ವಿಸ್ಟ್ ಡಿಸೈನ್ ಡೈಮಂಡ್ ಕಟ್ ಅಲಾಯ್ ವೀಲ್‌ಗಳು ಈ ಎಸ್‌ಯುವಿಗೆ ಮತ್ತಷ್ಟು ಕ್ರೀಡಾತ್ಮಕ ಮತ್ತು ಕಟ್ಟುಮಸ್ತಾದ ನೋಟ ನೀಡುತ್ತವೆ. ಇಸುಝು ಎಂಯು-ಎಕ್ಸ್ ‘‘5ಇಕ್ಯೂರ್’’ ಪ್ಯಾಕೇಜ್‌ನೊಂದಿಗೆ ಲಭ್ಯವಿದ್ದು, ವಾರಂಟಿ ಮತ್ತು ಉಚಿತ ನಿಗದಿತ ಅವಧಿಯ ನಿರ್ವಹಣೆಯನ್ನು 5 ವರ್ಷಗಳಿಗೆ ಅಥವಾ 150,000 ಕಿಮೀವರೆಗೆ (ಯಾವುದು ಮೊದಲೋ ಅದು) ಪೂರೈಸುತ್ತದೆ. ನೂತನ ಎಂಯು-ಎಕ್ಸ್ ಆಕರ್ಷಕ ಹಣಕಾಸು ನೆರವು ಆಯ್ಕೆಗಳಲ್ಲೂ ಲಭ್ಯ.(ನಿಯಮ ಮತ್ತು ಷರತ್ತುಗಳು ಅನ್ವಯ.)
ಇಸುಝು ಡಿ-ಮ್ಯಾಕ್ಸ್ ರೆಗ್ಯೂಲರ್ ಕ್ಯಾಬ್

ಇಸುಝು ಡಿ-ಮ್ಯಾಕ್ಸ್ ರೆಗ್ಯೂಲರ್ ಕ್ಯಾಬ್ ಒಂದು ಸಿಂಗಲ್ ಕ್ಯಾಬಿನ್ ಪಿಕ್‌ಅಪ್ ಆಗಿದ್ದು, ಶಕ್ತಿಶಾಲಿ, ದೃಢವಾದ ನಂಬಿಕಾರ್ಹ ವಾಹನವಾಗಿದೆ. ಜಾಗತಿಕವಾಗಿ ತನ್ನ ಪ್ರದರ್ಶನ ಮತ್ತು ದೀರ್ಘ ಬಾಳಿಕೆಗೆ ಹೆಸರಾಗಿದೆ. ಈ ರೆಗ್ಯೂಲರ್ ಕ್ಯಾಬ್ ಫ್ಲ್ಯಾಟ್ ಡೆಕ್ ಮತ್ತು ಕ್ಯಾಬ್ ಚಾಸಿ ಮಾದರಿಗಳಲ್ಲಿ ಲಭ್ಯವಿದೆ.

ಫ್ಲ್ಯಾಟ್ ಡೆಕ್ ಮಾದರಿ ವಾಣಿಜ್ಯ ಸಾರಿಗೆಯ ವಿಸ್ತಾರವಾದ ಶ್ರೇಣಿಯ ಉಪಯೋಗಗಳನ್ನು ಪೂರೈಸುವಲ್ಲಿ ಉತ್ಕಷ್ಟವಾಗಿದೆ. ಕ್ಯಾಬ್ ಛಾಸೀಸ್ ಮಾದರಿ, ಕೋಲ್ಡ್ ಚೇನ್ ಟ್ರಾನ್ಸ್‌ಪೋರ್ಟ್ ಬಳಕೆಗೆ ರೀಫರ್ ಕಂಟೇನರ್‌ಗಳನ್ನು ನಿರ್ಮಿಸಲು ಸೂಕ್ತವಾಗಿದೆ. ಕ್ಯಾಬ್ ಛಾಸೀಸ್ ಮಾದರಿಯನ್ನು ಸಾರಿಗೆಯಲ್ಲಿ ವಿಶೇಷ ಉದ್ದೇಶದ ಅನ್ವಯಗಳಿಗೆ ಮತ್ತು ಸಂಬಂಧಿತ ವಹಿವಾಟುಗಳಿಗೆ ಬಳಸಬಹುದು ಜೂನ್ 30ರವರೆಗೆ ಕಂಪನಿ ಡಿ-ಸರ್ವ್ ಪ್ಯಾಕೇಜನ್ನು ರೆಗ್ಯುಲರ್ ಕ್ಯಾಬ್ ಮಾದರಿಗಳಿಗೆ ಯಾವುದೇ ಹೆಚ್ಚಿನ ವೆಚ್ಚವಿಲ್ಲದೇ ಸಾದರಪಡಿಸುತ್ತಿದೆ.

ಈ ಪ್ಯಾಕೇಜ್ ಉಚಿತ ನಿಗದಿತ ಅವಧಿಯ ನಿರ್ವಹಣೆಯನ್ನು 3 ವರ್ಷಗಳಿಗೆ ಅಥವಾ 1,00,000 ಕಿ.ಮೀ.ವರೆಗೆ(ಯಾವುದು ಮೊದಲೋ ಅದು) ನೀಡಲಾಗುತ್ತಿದೆ. ಇದರಲ್ಲಿ ಪಿಎಂಎಸ್ ಭಾಗಗಳು, ಲೂಬ್ರಿಕೆಂಟ್‌ಗಳು, ಸಂಬಂಧಿತ ಕಾರ್ಯವೆಚ್ಚಗಳು ಮತ್ತು ಕೆಲವು ಸವೆಯುವ ಮತ್ತು ಹರಿಯುವ ವಸ್ತುಗಳು ಸೇರಿವೆ. ಇದರಲ್ಲಿ ಅಪಘಾತ ಸಂಬಂಧಿತ ಹಾನಿ ದುರಸ್ತಿ ಸೇರಿರುವುದಿಲ್ಲ. (ನಿಯಮ ಮತ್ತು ಷರತ್ತುಗಳು ಅನ್ವಯಿಸುತ್ತವೆ).

ಇಸುಝು ಡಿ-ಮ್ಯಾಕ್ಸ್ ಎಸ್-ಕ್ಯಾಬ್ ಇಸುಜು ಡಿ-ಮ್ಯಾಕ್ಸ್ ಎಸ್-ಕ್ಯಾಬ್, 5 ಆಸನಗಳ ಪಿಕ್‌ಅಪ್ ಆಗಿದ್ದು, ಸ್ಥಳಾವಕಾಶ, ಪ್ರದರ್ಶನ ಮತ್ತು ಶಕ್ತಿಯ ಚತುರ ಪ್ರಮಾಣಗಳ ಮಿಶ್ರಣವನ್ನು ಸಾದರಪಡಿಸುತ್ತದೆ. ಉನ್ನತ ಮಟ್ಟದ ನಾಜೂಕುತನ ಮತ್ತು ಸ್ಥಳಾವಕಾಶವನ್ನು ಬಯಸುವ ಆಧುನಿಕ ಉದ್ಯಮಿಗಳು ಮತ್ತು ವೃತ್ತಿಪರರರಿಗೆ ಇದು ಸೇವೆ ಸಲ್ಲಿಸುತ್ತದೆ.

ಎಸ್-ಕ್ಯಾಬ್ ಈಗ ಹೈ-ರೈಡ್ ಮಾದರಿಯಲ್ಲಿ ಕೂಡ ಲಭ್ಯವಿದ್ದು, ಸವಾಲಿನ ರಸ್ತೆಗಳಲ್ಲಿ ಸರಾಗವಾಗಿ ಚಲಿಸಲು ಅಗತ್ಯವಿರುವ ಉನ್ನತ ಗ್ರೌಂಡ್ ಕ್ಲಿಯರೆನ್ಸ್ ಪೂರೈಸುತ್ತದೆ. ಎಸ್.ಕ್ಯಾಬ್ ದಕ್ಷತಾಶಾಸ್ತ್ರಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದ್ದು, ಸುರಕ್ಷತೆ, ಅನುಕೂಲ ಮತ್ತು ಆರಾಮಕ್ಕೆ ಉನ್ನತ ವೈಶಿಷ್ಟ್ಯಗಳನ್ನು ಆಧುನಿಕ ಪಿಕ್‌ಅಪ್ ಅನ್ನು ಚಾಲಕರಿಗೆ ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News