ಜು. 30: ಯಾದ್ ಫೌಂಡೇಶನ್ ಮಲಾರ್ ಇದರ ವತಿಯಿಂದ ರಕ್ತದಾನ ಶಿಬಿರ
Update: 2019-06-28 23:50 IST
ಮಂಗಳೂರು: ಯಾದ್ ಫೌಂಡೇಶನ್ ಮಲಾರ್ ಇದರ ವತಿಯಿಂದ ಬ್ಲಡ್ ಡೋನರ್ಸ್ ಮಂಗಳೂರು ಸಹಭಾಗಿತ್ವದಲ್ಲಿ ದೇರಳಕಟ್ಟೆ ಯೆನೆಪೋಯ ವೈದ್ಯಕೀಯ ಆಸ್ಪತ್ರೆ ಸಹಕಾರದೊಂದಿಗೆ ಪಾವೂರ್ ಸಮುದಾಯ ಭವನ ಬಳಿ ಜು. 30 ರಂದು ಬೆಳಗ್ಗೆ 9 ರಿಂದ ಮದ್ಯಾಹ್ನ 1 ರ ತನಕ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ.
ಕಾರ್ಯಕ್ರಮವನ್ನು ಮಂಗಳೂರು ತಾಲ್ಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು ಉದ್ಘಾಟಿಸುವರು. ಮಲಾರ್ ಯಾದ್ ಫೌಂಡೇಶನ್ ಅಧ್ಯಕ್ಷ
ರಿಯಾಝ್ ಅಹ್ಮದ್ ಅಧ್ಯಕ್ಷತೆ ವಹಿಸುವರು. ಪಾವೂರ್ ಗ್ರಾಮ ಪಂಚಾಯತ್ ಅಧ್ಯಕ್ಷ ಫಿರೋಝ್ ಮಲಾರ್, ಉಪಾಧ್ಯಕ್ಷೆ ಲೀಲಾವತಿ, ಕೊಣಾಜೆ ಠಾಣೆ ಪೊಲೀಸ್ ಅಧಿಕಾರಿ ರವಿ ನಾಯ್ಕ್ , ಫಯಾಝ್ ಮಾಡೂರ್ ಹಾಗು ಇತರರು ಭಾಗವಹಿಸಲಿದ್ದಾರೆ ಎಂದು ಬ್ಲಡ್ ಡೋನರ್ಸ್ ಮಂಗಳೂರು ಪ್ರಕಟನೆಯಲ್ಲಿ ತಿಳಿಸಿದೆ.