×
Ad

ಬಂಟ್ವಾಳ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವನಮಹೋತ್ಸವ

Update: 2019-06-29 17:51 IST

ಬಂಟ್ವಾಳ, ಜೂ. 29: ಬಂಟ್ವಾಳ ಕೆಳಗಿನಪೇಟೆ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ವನಮಹೋತ್ಸವ ಕಾರ್ಯಕ್ರಮ ಶಾಲಾ ಅಧ್ಯಕ್ಷ ಹಾಜಿ ಬಿ.ಎ ಸುಲೇಮಾನ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು. 

ಕಾರ್ಪೊರೇಶನ್ ಬ್ಯಾಂಕ್‍ನ ಬಂಟ್ವಾಳ ಶಾಖೆಯ ಮ್ಯಾನೇಜರ್ ದಿನೇಶ್ ಭಟ್ ಅವರು ಗಿಡ ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ವನಮಹೋತ್ಸವದ ಆಚರಣೆಯ ಉಪಯುಕ್ತತೆ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಮಾತನಾಡಿದರು.

ವಿದ್ಯಾರ್ಥಿಗಳು ವನಮಹೋತ್ಸವ ಕುರಿತು ಗೀತೆಯನ್ನು ಹಾಡಿದರು. ಪರಿಸರದ ಉಳಿವು ಮತ್ತು ಸಂರಕ್ಷಣೆಯ ಕುರಿತು ಕಿರು ರೂಪಕವನ್ನು ವಿದ್ಯಾರ್ಥಿಗಳು ಮನೋಜ್ಞವಾಗಿ ಪ್ರದರ್ಶಿಸಿದರು. ವನಮಹೋತ್ಸವದ ಮಹತ್ವದ ಕುರಿತು ವಿದ್ಯಾರ್ಥಿ ಫಾಝಿಲ್ ಭಾಷಣ ಮಾಡಿದರು. ವಿದ್ಯಾರ್ಥಿ ನಾಯಕ, ನಾಯಕಿಯರು ಪ್ರೌಢ ಶಾಲಾ ಮುಖ್ಯಶಿಕ್ಷಕಿ ಮೆಟಿಲ್ಡಾ ಡಿಕೋಸ್ತಾ ನೇತೃತ್ವದಲ್ಲಿ ಹೂವಿನ ಕುಂಡಗಳಲ್ಲಿ ಗಿಡಗಳನ್ನು ನೆಟ್ಟರು. 

ಸಮಾರಂಭದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಬಿ.ಎ ಮುಹಮ್ಮದ್ ಹಾಗೂ ಶಬೀರ್ ಅಹ್ಮದ್, ಪಿಟಿಎ ಅಧ್ಯಕ್ಷ ಮುಹಮ್ಮದ್ ಹನೀಫ್, ತೌಹೀದ್ ಶಾಲಾ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ರಚನಾ, ಕೆ.ಜಿ ಮುಖ್ಯಸ್ಥೆ ಮಮತಾ ಸುವರ್ಣ, ಶಿಕ್ಷಕ ಶಿಕ್ಷಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಯರಾದ ಶಂಬ್ರೀನಾ ಸ್ವಾಗತಿಸಿ, ತಪ್ಸಿಯಾ ವಂದಿಸಿ, ಹೈಫಾ, ರಫಾ ಹಾಗೂ ಸಫ್ನಾಝ್ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News