×
Ad

ಬಿ.ಎ. ಪದವಿ ತರಗತಿಗೆ ತುಳು ಐಚ್ಛಿಕ ಪಠ್ಯ ಸಿದ್ದ: ಎ.ಸಿ. ಭಂಡಾರಿ

Update: 2019-06-29 18:01 IST

ಪುತ್ತೂರು: ಮಂಗಳೂರು ವಿಶ್ವ ವಿದ್ಯನಿಲಯ ವ್ಯಾಪ್ತಿಯ 6 ಕಾಲೇಜುಗಳಲ್ಲಿ ಈ ಶೈಕ್ಷಣಿಕ ವರ್ಷದಿಂದ ಬಿ.ಎ. ಪದವಿ ತರಗತಿಗೆ ತುಳು ಐಚ್ಛಿಕ ಪಠ್ಯ ವಿಷಯವನ್ನು ಕಲಿಸಲಾಗುತ್ತಿದ್ದು ಪಠ್ಯ ಪುಸ್ತಕವನ್ನು ಕರ್ನಾಟಕ, ತುಳು ಸಾಹಿತ್ಯ ಅಕಾಡಮಿಯು ತುಳು ಭಾಷಾ ತಜ್ಞರ ಸಭೆ ನಡೆಸಿ ಸಿದ್ಧಪಡಿಸಿದೆ. ಪಠ್ಯಪುಸ್ತಕದ ಮುದ್ರಣದ ವ್ಯವಸ್ಥೆಯನ್ನು ಮಂಗಳೂರು ವಿಶ್ವ ವಿದ್ಯಾನಿಲಯದ ಪ್ರಸಾರಾಂಗದ ಬದಲು ಅಕಾಡಮಿಯ ವತಿಯಿಂದಲೇ ಮುದ್ರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎ.ಸಿ. ಭಂಡಾರಿ ತಿಲಿಸಿದ್ದಾರೆ. 

ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ತುಳು ಭಾಷೆಯನ್ನು ಐಚ್ಛಿಕವಾಗಿ ಕಲಿಯುವ ವಿದ್ಯಾರ್ಥಿಗಳ ಭಾಷಾ ಪ್ರೇಮವನ್ನು ಅಕಾಡಮಿ ಅಭಿನಂದಿಸುತ್ತದೆ. ತುಳುವರ ಮಾತೃ ಭಾಷೆ ಇಂದು ಅಕಾಡಮಿಕ್ ಹಂತಕ್ಕೆ ತಲುಪಿರುವುದು ತುಳು ಭಾಷೆಯ ಬೆಳವಣಿಗೆಯ ಹಿನ್ನಲೆಯಲ್ಲಿ ಸಂತೋಷದ ವಿಚಾರವಾಗಿದೆ. ಮುಂದಿನ ವರ್ಷ ಪಿಯುಸಿ ಹಂತದಲ್ಲಿ ದ್ವಿತೀಯ ಭಾಷೆಯಾಗಿ ತುಳುವನ್ನು ಕಲಿಯಲು ಅವಕಾಶ ಸಿಗಲಿದೆ. ಸರಕಾರ ಈ ಕುರಿತು ಅನುಮತಿ ನೀಡಲಿದೆ ಎಂದರು. 

ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಈ ಸಾಲಿನಿಂದ ತುಳು ಎಂ.ಎ ತರಗತಿ ಆರಂಭವಾಗಲಿದೆ. ಎಲ್ಲರ ಅನುಕೂಲತೆಯ ದೃಷಷ್ಟಿಯಿಂದ ಎಂ.ಎ ತರಗತಿಗಳು ಮಂಗಳೂರು ನಗರದ ವಿಶ್ವ ವಿದ್ಯಾನಿಲಯ ಕಾಲೇಜಿನಲ್ಲಿ ಸಂಜೆಯ ವೇಳೆ ನಡೆಯಲಿದೆ. ಎಂ.ಎ ಹಂತದ ಪಠ್ಯಪುಸ್ತಕ ಮತ್ತು ವಿಷಯ ಜೋಡಣೆಯನ್ನು ಅಕಾಡಮಿಯ ವತಿಯಿಂದಲೇ ಭಾಷಾ ತಜ್ಞರ ಸಹಕಾರದಿಂದ ರೂಪಿಸಲಾಗಿದೆ. ತುಳು ಭಾಷೆಯು ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಶೈಕ್ಷಣಿಕ ಮಟ್ಟದಲ್ಲಿ ಎತ್ತರದ ಸ್ಥಾನಕ್ಕೆ ಎರುತ್ತಿರುವುದು ತುಳು ಭಾಷಿಕರ ಅಭಿಮಾನಹದ ಸಂಕೇತವಾಗಿದೆ ಎಂದರು. 

ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸದಸ್ಯ ನಿರಂಜನ ರೈ ಮಠಂತಬೆಟ್ಟು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News