×
Ad

ಚೀನಾ ಜೊತೆಗಿನ ವ್ಯಾಪಾರ ಮತ್ತೆ ಹಳಿಗೆ: ಟ್ರಂಪ್

Update: 2019-06-29 21:32 IST

ಬೀಜಿಂಗ್, ಜೂ. 29: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆ ಶನಿವಾರ ‘ಅತ್ಯುತ್ತಮ’ ಮಾತುಕತೆ ನಡೆದ ಬಳಿಕ, ಆ ದೇಶದೊಂದಿಗಿನ ವ್ಯಾಪಾರ ಮಾತುಕತೆ ಮತ್ತೆ ‘ಹಳಿಗೆ ಬಂದಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಚೀನಾದ ಸರಕುಗಳ ಮೇಲೆ ಹೊಸದಾಗಿ ಹೇರಲು ಉದ್ದೇಶಿಸಲಾಗಿರುವ ಆಮದು ತೆರಿಗೆಯನ್ನು ತಡೆಹಿಡಿಯಲು ಅಮೆರಿಕ ಅಧ್ಯಕ್ಷರು ಮಾತುಕತೆಯ ವೇಳೆ ಒಪ್ಪಿದ್ದಾರೆ ಎನ್ನಲಾಗಿದೆ.

ಜಪಾನ್‌ನ ಒಸಾಕದಲ್ಲಿ ನಡೆಯುತ್ತಿರುವ ಜಿ20 ಶೃಂಗ ಸಭೆಯ ನೇಪಥ್ಯದಲ್ಲಿ ಈ ಮಾತುಕತೆ ನಡೆಯಿತು.

‘‘ಚೀನಾದ ಅಧ್ಯಕ್ಷ ಕ್ಸಿ ಜೊತೆಗೆ ನಾವು ಅತ್ಯುತ್ತಮ ಸಭೆಯೊಂದನ್ನು ನಡೆಸಿದೆವು’’ ಎಂದು ಮಾತುಕತೆಯ ಬಳಿಕ ಟ್ರಂಪ್ ಹೇಳಿದರು. ‘‘ಆ ಮಾತುಕತೆ ಅತ್ಯುತ್ತಮವಾಗಿತ್ತು ಎಂದು ನಾನು ಹೇಳುತ್ತೇನೆ’’ ಎಂದರು.

‘‘ನಾವು ಹಳಿಗೆ ಮರಳಿದ್ದೇವೆ’’ ಎಂದು ಅವರು ಹೇಳಿದರಾದರೂ, ಯಾವುದಾದರೂ ಒಪ್ಪಂದ ಏರ್ಪಟ್ಟಿದೆಯೇ ಎಂಬುದನ್ನು ಹೇಳಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News