ತೈಲ ಉತ್ಪಾದನೆ ಕಡಿತ ಮುಂದುವರಿಕೆ: ಪುಟಿನ್

Update: 2019-06-29 16:08 GMT

ಒಸಾಕ, ಜೂ. 29: ಪುಷ್ಕಳ ಜಾಗತಿಕ ತೈಲ ಪೂರೈಕೆಯ ಹಿನ್ನೆಲೆಯಲ್ಲಿ, ತೈಲ ಉತ್ಪಾದನೆಯಲ್ಲಿನ ಕಡಿತವನ್ನು ಮುಂದುವರಿಸಲು ರಶ್ಯ ಮತ್ತು ಸೌದಿ ಅರೇಬಿಯ ಒಪ್ಪಿಕೊಂಡಿವೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶನಿವಾರ ಹೇಳಿದ್ದಾರೆ.

 ‘‘ಉತ್ಪಾದನೆ ಕಡಿತ ಒಪ್ಪಂದವನ್ನು ರಶ್ಯ ಮತ್ತು ಸೌದಿ ಅರೇಬಿಯಗಳು ಮುಂದುವರಿಸಲಿವೆ. ಎಷ್ಟು ಸಮಯದವರೆಗೆ? ಅದರ ಬಗ್ಗೆ ನಾವು ಯೋಚಿಸುತ್ತೇವೆ. ಆರು ಅಥವಾ ಒಂಬತ್ತು ತಿಂಗಳು ಇರಬಹುದು. ಒಂಬತ್ತು ತಿಂಗಳವರೆಗೆ ವಿಸ್ತರಿಸುವ ಸಾಧ್ಯತೆಯಿದೆ’’ ಒಸಾಕದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪುಟಿನ್ ಹೇಳಿದರು.

 ದೈನಂದಿನ ತೈಲ ಉತ್ಪಾದನೆಯನ್ನು 12 ಲಕ್ಷ ಬ್ಯಾರೆಲ್‌ಗಳಷ್ಟು ಕಡಿತಗೊಳಿಸಲು ಒಪೆಕ್ ಮತ್ತು ಇತರ ತೈಲ ಉತ್ಪಾದಕ ದೇಶಗಳು ಡಿಸೆಂಬರ್‌ನಲ್ಲಿ ನಿರ್ಧರಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News