×
Ad

ಉಡುಪಿ: ಸಾಂಖ್ಯಿಕ ದಿನ ಆಚರಣೆ

Update: 2019-06-29 23:05 IST

ಉಡುಪಿ, ಜೂ.29: ಖ್ಯಾತ ಸಂಖ್ಯಾಶಾಸ್ತ್ರಜ್ಞ ಪ್ರೊ.ಮಹಾಲನೋಬೀಸ್ ಅವರ ಜನ್ಮದಿನಾಚರಣೆಯನ್ನು ಸಾಂಖ್ಯಿಕ ದಿನವನ್ನಾಗಿ ಶನಿವಾರ ಉಡುಪಿ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಉದ್ಘಾಟಿಸಿ ದರು. ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ದಿನಾಚರಣೆಯ ಮಹತ್ವ ಮತ್ತು ಯಾವುದೇ ಯೋಜನೆಗಳ ಅನುಷ್ಠಾನ ಹಾಗೂ ಯಶಸ್ಸಿಗೆ ಕಾಲಮಿತಿಯ ಉತ್ತಮ ಗುಣಮಟ್ಟದ ಅಂಕಿ ಅಂಶದ ಅವಶ್ಯಕತೆ ಯನ್ನು ತಿಳಿಸಿದರು.

ಮಂಗಳೂರು ಮೀನುಗಾರಿಕಾ ವಿಶ್ವ ವಿದ್ಯಾಲಯದ ನಿವೃತ್ತ ಪ್ರೊ. ರಾಮ ಚಂದ್ರ ಭಟ್ ಸುಸ್ಥಿರ ಅಭಿವೃದ್ಧಿಯ ಗುರಿಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎ.ನಾಗರಾಜ ರಾವ್ ಸ್ವಾತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News