ಬೆಲ್ಜಿಯಂ ಇಸಿಬಿಇ ಸಮಾವೇಶದಲ್ಲಿ ಡಾ.ಮೊಹಮ್ಮದ್ ಕಾಪು ಉಪನ್ಯಾಸ
ಬ್ರುಸೆಲ್ಸ್, ಜೂ. 29: ಲಂಡನ್ ಅಮೆರಿಕನ್ ಸಿಟಿ ಕಾಲೇಜು ಹಾಗೂ ಅದರ ಅಂಗ ಸಂಸ್ಥೆಗಳ ಡೀನ್ ಮತ್ತು ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಮೆರಿಕದ ಮಿಚಿಗನ್‌ನಲ್ಲಿರುವ ಮಡೋನಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿರುವ ಪ್ರೊ. ಡಾ. ಕಾಪು ಮುಹಮ್ಮದ್ ಅವರು ‘ವ್ಯಾವಹಾರಿಕ ಶಿಕ್ಷಣದಲ್ಲಿ ಡಿಜಿಟಲ್ ರೂಪಾಂತರ’ ದ ಬಗ್ಗೆ ಅಧ್ಯಯನ ಮಂಡಿಸಿದರು ಮತ್ತು ಜಗತ್ತಿನಲ್ಲಿ ಆನ್‌ಲೈನ್ ಶಿಕ್ಷಣದ ಸೂಕ್ಷ್ಮ ಮೌಲ್ಯ ಮಾಪನದ ಕುರಿತು ಉಪನ್ಯಾಸ ನೀಡಿದರು.
ಡಾ. ಕಾಪು ಮುಹಮ್ಮದ್ ಅವರು ವಿಷಯಾಧಾರಿತ ವಿಶ್ಲೇಷಣೆ, ಗುಣಮಟ್ಟ ನಿರ್ವಹಣೆ ಮತ್ತು ಸ್ವಾಟ್ ವಿಶ್ಲೇಷಣೆಯನ್ನು ಅಭ್ಯಸಿಸುವ ಬೆಲ್ಝಿಯಂನ ಬ್ರುಸೆಲ್ಸ್‌ನಲ್ಲಿರುವ ಇಸಿಬಿಇಯ ಸಾಮಾನ್ಯ ಸಭೆಗೆ ಹಾಜರಾಗಿದ್ದರು.
ಅವರು ಆನ್‌ಲೈನ್ ಶಿಕ್ಷಣ, ಅದರ ಸಾಂಸ್ಕೃತಿಕ ಪರಿಣಾಮಗಳು ಮತ್ತು ತಾತ್ಕಾಲಿಕ ಅಪ್ಲಿಕೇಶನ್‌ನಗಳು, ಮಿಶ್ರಿತ ಕಲಿಕೆ ಮತ್ತು ಆನ್‌ಲೈನ್ ಕಲಿಕೆ ಮುಂತಾದ ಈ ಲರ್ನಿಂಗ್ ಪರಿಕಲ್ಪನೆಯ ವಿವಿಧ ದಾರಿಗಳನ್ನು ಉಲ್ಲೇಖಿಸಿದರು.
ಡಾ. ಕಾಪು ಮುಹಮ್ಮದ್ ಅವರು ಈ ಲರ್ನಿಂಗ್ ಮತ್ತು ಉನ್ನತ ಶಿಕ್ಷಣದ ಡಿಜಿಲೀಕರಣದ ಲಾಭ ಮತ್ತು ನಷ್ಟಗಳ ಬಗ್ಗೆ ಮಾತನಾಡಿದರು. ಜೊತೆಗೆ ಆನ್‌ಲೈನ್ ಪದವಿ ಕಾರ್ಯಕ್ರಮಗಳು ಮತ್ತು ಅವುಗಳ ಸ್ವೀಕಾರದ ಮೇಲೆ ಪ್ರಭಾವ ಬೀರುವ ಪರಿಸ್ಥಿತಿಯ ಬಗ್ಗೆ ಇರುವ ಸಾಮಾನ್ಯ ಆತಂಕದ ಕುರಿತು ಮಾತನಾಡಿದರು.