ಕುದ್ಮುಲ್ ರಂಗರಾವ್ ಚಿಂತನೆ ಇಂದಿಗೂ ಪ್ರಸ್ತುತ: ಶಾಸಕ ಕಾಮತ್

Update: 2019-06-29 18:08 GMT

ಮಂಗಳೂರು, ಜೂ.29: ದಲಿತರ ಉದ್ಧಾರಕ್ಕಾಗಿ ತನು, ಮನ, ಧನ ಅರ್ಪಿಸಿ, ಹಿಂದುಳಿದ ವರ್ಗದವರ ಕಲ್ಯಾಣಕ್ಕಾಗಿ ಸಾಮಾಜಿಕ ಕ್ರಾಂತಿ ಮಾಡಿದ ಮಹಾನ್ ಚೇತನ ಕುದ್ಮುಲ್ ರಂಗರಾವ್ ಅವರ ಚಿಂತನೆಗಳನ್ನು ನಾವು ಅನುಸರಿಸುವ ಮೂಲಕ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸೋಣ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದರು.

ಅವರು ಮಂಗಳೂರಿನ ಅತ್ತಾವರ ಬಾಬುಗುಡ್ಡೆಯಲ್ಲಿರುವ ಕುದ್ಮುಲ್ ರಂಗರಾವ್ ಅವರ ಸಮಾಧಿಗೆ ನಮನ ಸಲ್ಲಿಸಿ ಮಾತನಾಡುತ್ತಿದ್ದರು.
ಶಾಸಕನಾಗಿ ಆಯ್ಕೆಯಾಗುವ ಮುನ್ನ ನಾಮಪತ್ರ ಸಲ್ಲಿಸುವಾಗ ಮೊದಲು ಕುದ್ಮುಲ್ ರಂಗರಾವ್ ಅವರ ಸಮಾಧಿಗೆ ನಮನ ಸಲ್ಲಿಸಿ ಆರ್ಶೀವಾದವನ್ನು ಪಡೆದದ್ದನ್ನು ಸ್ಮರಿಸಿದ ಶಾಸಕ ಕಾಮತ್, ಪ್ರಸ್ತುತ ಕುದ್ಮುಲ್ ರಂಗರಾವ್ ಅವರ ಚಿಂತನೆಯೇ ಸಮಾಜದ ಅಭಿವೃದ್ಧಿಗೆ ಮುನ್ನುಡಿಯಾಗಿದೆ ಎಂದು ಶಾಸಕ ಕಾಮತ್ ತಿಳಿಸಿದರು.

ಕುದ್ಮುಲ್ ರಂಗರಾವ್ ಮೆಮೊರಿಯಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಬಿ.ಆರ್.ಹೃದಯನಾಥ, ಬಿಜೆಪಿ ಮುಖಂಡ ವಸಂತ್ ಜೆ. ಪೂಜಾರಿ, ಪ್ರಮುಖರಾದ ಕೇಶವ ಧರಣಿ, ರಘುರಾಜ್ ಕದ್ರಿ, ದೇವೇಂದ್ರ ಕಾಪಿಕಾಡ್, ಶ್ಯಾಮ ಕರ್ಕೇರಾ, ತುಳಸಿದಾಸ ಕಾಪಿಕಾಡ್, ಕಿರಣ್ ಕುಮಾರ್ ಕೊಡಿಯಾಲ್ ಬೈಲ್, ಶಶಿಕಾಂತ್ ಬಿಎಸ್, ಶ್ರೀಧರ್ ಬಿ., ರವೀಂದ್ರನಾಥ್, ಲಲ್ಲೇಶ್ ಕುಮಾರ್, ದೇವದಾಸ್ ಶೆಟ್ಟಿ, ಜನಾರ್ದನ ಕಾಪಿಕಾಡ್, ಉಮೇಶ್ ಕುಮಾರ್ ಕಾಪಿಕಾಡ್, ರವೀಂದ್ರ ಸೂಟರ್‌ಪೇಟೆ, ರಘುವೀರ್ ಬಾಬುಗುಡ್ಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News