ವೃತ್ತಿ ರಂಗಭೂಮಿ ಶಿಷ್ಯ ವೇತನ- ಮೌಖಿಕ ಸಂದರ್ಶನ
ಉಡುಪಿ, ಜೂ.29: ವೃತ್ತಿ ರಂಗಭೂಮಿಯಲ್ಲಿ ತರಬೇತಿ ಪಡೆದು, ಅದೇ ಮಾಧ್ಯಮದಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಹೊಂದಿರುವ ಯುವಕ/ಯುವತಿಯರಿಂದ ಶಿಷ್ಯವೇತನಕ್ಕಾಗಿ ವೌಖಿಕ ಸಂದರ್ಶನ ನಡೆಸಲಾಗುತ್ತಿದೆ.
ಶಿಷ್ಯವೇತನವನ್ನು 6 ತಿಂಗಳಿಗೆ ನೀಡಲಾಗುತ್ತಿದ್ದು, ಜುಲೈ 11ರಂದು ಬೆಳಗ್ಗೆ 10.30ಕ್ಕೆ ಧಾರವಾಡದ ರಂಗಾಯಣದ ಆವರಣದಲ್ಲಿ ವೌಖಿಕ ಸಂದರ್ಶನ ಏರ್ಪಡಿಸಲಾಗಿದೆ. ಇನ್ನೂ ಅರ್ಜಿ ಸಲ್ಲಿಸದ ಆಸಕ್ತ ಯುವಕ ಯುವತಿಯರು ನೇರವಾಗಿ ಸಂದರ್ಶನದಲ್ಲಿ ಭಾಗವಹಿಸಬಹುದು.
ಒಟ್ಟು 15 ಮಂದಿಗೆ ಮಾಹೆಯಾನ 10,000 ರೂ.ಗಳನ್ನು 6 ತಿಂಗಳುಗಳ ಕಾಲ ಶಿಷ್ಯ ವೇತನ ನೀಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಆರು ತಿಂಗಳುಗಳ ಕಾಲ ಅಕಾಡೆಮಿ ಸೂಚಿಸುವ ವೃತ್ತಿ ನಾಟಕ ಕಂಪೆನಿಯಲ್ಲಿ ಸ್ವಂತ ಜಬಾಬ್ದಾರಿಯಿಂದ ಕೆಲಸ ಮಾಡಬೇಕು. ಊಟ ವಸತಿಯನ್ನು ಆಯಾ ವೃತ್ತಿ ನಾಟಕ ಸಂಸ್ಥೆ ಒದಗಿಸುತ್ತದೆ. 18ರಿಂದ 35 ವರ್ಷಗಳ ವಯೋಮಿತಿಯವರಿಂದ ಅರ್ಜಿ ಆಹ್ವಾನಿಸಲಾಗಿದೆ. ಗ್ರಾಮೀಣ ಪ್ರದೇಶದ ಆಸಕ್ತರಿಗೆ ಮತ್ತು ರಂಗ ಭೂಮಿಯಲ್ಲಿ ಅನುಭವವಿರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಈಗಾಗಲೇ ಅರ್ಜಿ ಸಲ್ಲಿಸಿರುವ ಹಾಗೂ ನೇರವಾಗಿ ಮೌಖಿಕ ಪರೀಕ್ಷೆಗೆ ಹಾಜರಾಗುವ ಅ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿಯೇ ಸಂದರ್ಶನದಲ್ಲಿ ಭಾಗವಹಿಸಬೇಕು. ಆಸಕ್ತಿಯುಳ್ಳ ಅ್ಯರ್ಥಿಗಳು ತಮ್ಮ ಸ್ವವಿವರ ಹಾಗೂ ವಿದ್ಯಾರ್ಹತೆಯ ಪ್ರಮಾಣ ಪತ್ರಗಳು(ಕನಿಷ್ಠ 7ನೆ ತರಗತಿ ಓದಿರಬೇಕು), ಆಧಾರ್ ಕಾರ್ಡ್, ರಂಗಭೂಮಿಯ ಅನುಭವದ ಬಗ್ಗೆ ಪ್ರಮಾಣ ಪತ್ರಗಳು (ಇದ್ದರೆ ಮಾತ್ರ), ಇಲ್ಲದಿದ್ದಲ್ಲಿ ಸ್ವಘೋಷಿತ ಪ್ರಮಾಣ ಪತ್ರ, ಪಾಸ್ ಪೋರ್ಟ್ ಆಳತೆಯ ಮೂರು ಭಾವಚಿತ್ರಗಳ, ದಾಖಲೆಗಳೊಂದಿಗೆ, ರಂಗಭೂಮಿ ಅನುಭವದ ಕುರಿತು ಸ್ವಯಂ ಅರ್ಜಿಯನ್ನು ಸಲ್ಲಿಸಬೇಕು. ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು.
ಅಭ್ಯರ್ಥಿಗಳು ಕನ್ನಡ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವ ಕೌಶಲ್ಯ ಹೊಂದಿರಬೇಕು. ಹೆಚ್ಚಿನ ವಿವರಗಳಿಗಾಗಿ ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಭವನ, ಚಾಲುಕ್ಯ ವಿಭಾಗ, ಜೆ.ಸಿ.ರಸ್ತೆ ಬೆಂಗಳೂರು, ದೂ.ಸಂ.: 080- 22237484 ನ್ನು ಸಂಪರ್ಕಿಸುವಂತೆ ಕರ್ನಾಟಕ ನಾಟಕ ಅಕಾಡೆಮಿ ರಿಜಿಸ್ಟ್ರಾರ್ ಡಾ.ಶೈಲಜಾ ಎ.ಸಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.