ಧೋನಿ ನಾಲ್ಕನೇ ಕ್ರಮಾಂಕದಲ್ಲಿ ಆಡಬೇಕು: ಜೋನ್ಸ್ ಸಲಹೆ

Update: 2019-06-29 18:44 GMT

ಮುಂಬೈ, ಜೂ.29: ‘‘ಈಗ ನಡೆಯುತ್ತಿರುವ ವಿಶ್ವಕಪ್‌ನ ಉಳಿದ ಪಂದ್ಯಗಳಲ್ಲಿ ಮಹೇಂದ್ರ ಸಿಂಗ್ ಧೋನಿ ಭಾರತಕ್ಕೆ ನಿರ್ಣಾಯಕವಾಗಿರುವ ನಾಲ್ಕನೇ ಕ್ರಮಾಂಕದಲ್ಲಿ ಆಡಬೇಕು’’ ಎಂದು ಆಸ್ಟ್ರೇಲಿಯದ ಮಾಜಿ ದಾಂಡಿಗ ಡೀನ್ ಜೋನ್ಸ್ ಸಲಹೆ ನೀಡಿದ್ದಾರೆ.

ಅಫ್ಘಾನಿಸ್ತಾನ ಹಾಗೂ ವೆಸ್ಟ್‌ಇಂಡೀಸ್ ವಿರುದ್ಧ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್‌ನಿಂದಾಗಿ ಧೋನಿ ಟೀಕೆ ಎದುರಿಸಿದ್ದರು. ಸಾಮಾನ್ಯವಾಗಿ ಉತ್ತಮವಾಗಿ ಆಡುವ ತಂಡದ ಬಗ್ಗೆ ನಾನು ಮಾತನಾಡುವುದಿಲ್ಲ. ಭಾರತ ಈಗ ಚೆನ್ನಾಗಿ ಆಡುತ್ತಿದೆ. ಆದರೆ, ನನಗೆ ನಾಲ್ಕನೇ ಕ್ರಮಾಂಕದ ಬಗ್ಗೆ ಅತೃಪ್ತಿಯಿದೆ. 37ರ ಹರೆಯದ ಧೋನಿ ನಾಲ್ಕನೇ ಕ್ರಮಾಂಕದಲ್ಲಿ ವಿಜಯ ಶಂಕರ್ ಬದಲಿಗೆ ಆಡಬೇಕು. ಎಡಗೈ ಆಲ್‌ರೌಂಡರ್ ರವೀಂದ್ರ ಜಡೇಜರನ್ನು ಆಡುವ 11ರ ಬಳಗದಲ್ಲಿ ಸೇರಿಸಿಕೊಳ್ಳಬೇಕು. ಅವರು ತಂಡಕ್ಕೆ ಹೆಚ್ಚುವರಿ ಸ್ಪಿನ್ ಆಯ್ಕೆಯನ್ನು ನೀಡುತ್ತಾರೆ ಎಂದು ಜೋನ್ಸ್ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News