×
Ad

ರೋಗಿಯನ್ನು ಬೆಡ್‌ಶೀಟ್ ಮೂಲಕ ಎಕ್ಸ್‌ರೇ ಕೊಠಡಿಗೆ ಎಳೆದೊಯ್ದ ಆಸ್ಪತ್ರೆ ಸಿಬ್ಬಂದಿ!

Update: 2019-06-30 10:36 IST

ಭೋಪಾಲ್, ಜೂ.30: ರೋಗಿಯನ್ನು ಬೆಡ್ ಶೀಟ್‌ನ ಮೂಲಕವೇ ಎಕ್ಸ್‌ರೇ ಕೊಠಡಿಗೆ ಎಳೆದೊಯ್ದ ತೀರಾ ನಿರ್ಲಕ್ಷದ ಘಟನೆ ಮಧ್ಯಪ್ರದೇಶದ ಜಬಲಾಪುರ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ.

ನೇತಾಜಿ ಸುಭಾಶ್ ಚಂದ್ರ ಬೋಸ್ ಮೆಡಿಕಲ್ ಕಾಲೇಜು(ಎನ್‌ಎಸ್‌ಸಿಬಿಎಂಸಿ)ಆಸ್ಪತ್ರೆಯ ಸಿಬ್ಬಂದಿ ಬೆಡ್‌ಶೀಟ್‌ನಂತೆ ಕಾಣುವ ಬಟ್ಟೆಯ ಮೇಲೆ ಮಲಗಿದ್ದ ರೋಗಿಯನ್ನು ಎಳೆದುಕೊಂಡು ಹೋಗುತ್ತಿರುವ ವಿಡಿಯೋವನ್ನು ನ್ಯೂಸ್ ಏಜೆನ್ಸಿ ಎಎನ್‌ಐ ಟ್ವೀಟ್ ಮಾಡಿದೆ. ಹೆಚ್ಚಿನ ರೋಗಿಗಳು ನೆಲದ ಮೇಲೆ ಮಲಗಿರುವ ದೃಶ್ಯ ವಿಡಿಯೋದಲ್ಲಿ ಕಾಣುತ್ತಿದೆ.

ಘಟನೆಗೆ ಸಂಬಂಧಿಸಿ ಮೂವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ನೇತಾಜಿ ಸುಭಾಶ್ ಚಂದ್ರ ಬೋಸ್ ಮೆಡಿಕಲ್ ಕಾಲೇಜು ಡೀನ್ ನವನೀತ್ ಸಕ್ಸೇನಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News