×
Ad

ಪೊಲೀಸ್ ತಂಡ, ಅರಣ್ಯಪಾಲಕರ ಮೇಲೆ ಟಿಆರ್‌ಎಸ್ ಕಾರ್ಯಕರ್ತರ ದಾಳಿ

Update: 2019-06-30 14:45 IST

ಹೈದರಾಬಾದ್, ಜೂ.30: ಕೊಮರಮ್ ಭೀಮ್ ಅಸಿಫಾಬಾದ್ ಜಿಲ್ಲೆಯ ಸಿರ್‌ಪುರ್ ಕಗಝನಗರ ಬ್ಲಾಕ್‌ನಲ್ಲಿ ಸಸಿ ನೆಡುವ ಅಭಿಯಾನದ ವೇಳೆ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್)ಕಾರ್ಯಕರ್ತರು ಪೊಲೀಸ್ ತಂಡ ಹಾಗೂ ಅರಣ್ಯ ರಕ್ಷಕರ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ.

ದಾಳಿಯ ವೇಳೆ ಮಹಿಳಾ ಅರಣ್ಯರಕ್ಷಕರಿಗೆ ಗಾಯವಾಗಿದೆ. ಸ್ಥಳೀಯ ಟಿಆರ್‌ಎಸ್ ಶಾಸಕ ಕೊನೆರು ಕೊನಪ್ಪರ ಸಹೋದರ ದಾಳಿಯ ನೇತೃತ್ವವಹಿಸಿದ್ದು, ಆತ ಜಿಲ್ಲಾ ಪರಿಷದ್‌ನ ಅಧ್ಯಕ್ಷನಾಗಿದ್ದಾನೆ.

ಫಾರೆಸ್ಟ್ ಅಧಿಕಾರಿಗಳ ತಂಡ ಟಿಆರ್‌ಎಸ್ ಮುಖಂಡ ಅತಿಕ್ರಮಿಸಿಕೊಂಡಿದ್ದ ಜಮೀನಿನಲ್ಲಿ ಗಿಡ ನೆಡಲು ಪ್ರಯತ್ನಿಸಿದಾಗ ಗಲಾಟೆ ನಡೆದಿದೆ. ಘಟನೆಯಲ್ಲಿ ಅರಣ್ಯ ಅಧಿಕಾರಿ ಅನಿತಾ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಟಿಆರ್‌ಎಸ್ ನಾಯಕ ಕೃಷ್ಣ ಸಹಿತ 16 ಜನರ ವಿರುದ್ಧ ಐಪಿಸಿ ಸೆಕ್ಷನ್‌ಗಳದ 353, 332, 307, 147, 148, 149, 427 ಹಾಗೂ 507ರ ಅಡಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News