×
Ad

​ಮಂಗಳೂರು ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಗಮನ ಕೊಡುತ್ತೇನೆ: ನಳಿನ್ ಕುಮಾರ್

Update: 2019-06-30 16:45 IST

ಉಳ್ಳಾಲ: ಈ ಬಾರಿಯ ಲೋಕಸಭಾ ಚುನಾವಣೆಯ ಕಿಚ್ಚು ಆರಂಭವಾದದ್ದೇ ಮಂಗಳೂರು ಕ್ಷೇತ್ರದಿಂದ,ಆದುದರಿಂದ ಈ ಕ್ಷೇತ್ರವನ್ನು ನಾನು ಮತ್ತು ಕೋಟ ಶ್ರೀನಿವಾಸ ಪೂಜಾರಿ ಹೆಚ್ಚು ಗಮನಿಸುತ್ತೇವೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಕೋಟೆಕಾರು ಅಡ್ಕ ಶ್ರೀ ಭಗವತಿ ಸಭಾಭವನದಲ್ಲಿ ರವಿವಾರ ಬಿಜೆಪಿ ಮಂಗಳೂರು ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ‌ ನಡೆದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು.

ರಾಜಕೀಯದಲ್ಲಿ ಹಿರಿಯರನ್ನ ಆದರ್ಶವನ್ನಾಗಿಸಿದಲ್ಲಿ ಯಶಸ್ವಿಯಾಗಲು ಸಾಧ್ಯ. ನಾನು ಡಾ.ವಿ.ಎಸ್ ಆಚಾರ್ಯ, ಕೋಟ ಶ್ರೀನಿವಾಸ್ ಪೂಜಾರಿಯವರನ್ನೇ ಆದರ್ಶರನ್ನಾಗಿಸಿದೆ. ದೇಶದಲ್ಲಿ ವಿರೋಧ ಪಕ್ಷಕ್ಕೂ ಅರ್ಹತೆ ಇಲ್ಲದ ಪಾರ್ಟಿ ಕಾಂಗ್ರೆಸ್ ಆಗಿದ್ದು, ಜಿಲ್ಲೆಯಲ್ಲೂ ಅಸ್ಥಿತ್ವವನ್ನು ಕಳೆದಿದ್ದು ಇದಕ್ಕೆ ಹಿರಿಯ ಬಿಜೆಪಿಗರ ಪರಿಶ್ರಮವೇ ಕಾರಣವಾಗಿದೆ. ಈ  ಬಾರಿಯೂ ಜನರು‌ ನನಗೆ ಆಶೀರ್ವದಿಸಿದ್ದು ಮತದಾರರ ನಂಬಿಕೆಗೆ ಚ್ಯುತಿ ಬಾರದ ರೀತಿಯಲ್ಲಿ ಮುಂದಿನ ಐದು ವರ್ಷ ಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದಾಗಿ ಹೇಳಿದರು.

ಕ್ಷೇತ್ರಾಧ್ಯಕ್ಷರಾದ ಸಂತೋಷ್ ಕುಮಾರ್ ಬೊಳಿಯಾರು ಅವರು ಮಾತನಾಡಿ ಸಂಸದ ನಳಿನ್ ಅವರು ಕ್ಷೇತ್ರದುದ್ದಕ್ಕೂ ಉತ್ತಮ ಅಭಿವೃದ್ಧಿ ಕಾರ್ಯ ನಡೆಸಿದರೂ ಕೆಲವರು ಸಾಮಾಜಿಕ ಜಾಲತಾಣದಲ್ಲಿ, ಫ್ಲೆಕ್ಸ್ ಗಳಲ್ಲಿ ನಳಿನ್ ಅವರಿಗೆ ಈ ಬಾರಿ ಟಿಕೆಟ್ ದೊರಕಬಾರದೆಂದು ಅಪಪ್ರಚಾರ  ನಡೆಸಿ ಷಡ್ಯಂತರ ರೂಪಿಸಿದರೂ ಮತ್ತೆ ಅವರಿಗೆ ಟಿಕೆಟ್ ದೊರೆತು ಎರಡೂವರೆ ಲಕ್ಷ ಮತಗಳ ಅಂತರದಿಂದ ಮೂರನೇ ಬಾರಿ ಗೆದ್ದು ಸಂಸದರಾಗಿರುವುದು ನಮ್ಮ ಪ್ರಯತ್ನಕ್ಕೆ ಸಂದ ಜಯ.ಜಿಲ್ಲೆಯಿಂದ 7 ಶಾಸಕರನ್ನು ಗೆಲ್ಲಿಸಿ ವಿದಾನಸಭೆಗೆ ಕಳುಹಿಸಿದಾಗಲೇ ನಳಿನ್ ಅವರ ತಾಕತ್ತೇನೆಂದು ಗೊತ್ತಾಗಿತ್ತು. ತೊಕ್ಕೊಟ್ಟು ಪ್ಲೈ ಓವರ್ ಕಾಮಗಾರಿ ಮುಕ್ತಾಯಕ್ಕೆ ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಸಂಸದರಿಂದ ಮತ್ತಷ್ಟು ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಾಗಲಿ ಎಂದು ಆಶಿಸಿದರು.

ವಿದಾನ‌ ಪರಿಷತ್ ವಿಪಕ್ಷ ನಾಯಕರಾದ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ ಬದ್ಧತೆ, ಸಿದ್ಧತೆ, ನೇರ ನಡತೆ, ವಿಶ್ವಾಸಾರ್ಹ ರಾಜಕಾರಣಕ್ಕೆ ಸಂಸದ ನಳಿನ್ ಹೆಸರಾಗಿದ್ದರೂ ಇಂದಿಗೂ ಅವರು ಸಾಮಾನ್ಯ ಕಾರ್ಯಕರ್ತರಾಗಿದ್ದಾರೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಚುನಾವಣಾ ಖರ್ಚಿನಲ್ಲಿ ಅತೀ ಹೆಚ್ಚಿನ ಕಾರ್ಯಕರ್ತರ ಬೆಂಬಲದಿಂದ ಜಯಿಸಿದ ಸಂಸದ ನಳಿನ್ ಎಂದರು.

ಮಾಜಿ ಶಾಸಕ ಜಯರಾಮ ಶೆಟ್ಟಿ,ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು,ಜಿಲ್ಲಾ ಕಾರ್ಯದರ್ಶಿಗಳಾದ ನಮಿತಾ ಶ್ಯಾಂ, ಸತೀಶ್ ಕುಂಪಲ,ಕ್ಷೇತ್ರ ಪ್ರದಾನ ಕಾರ್ಯದರ್ಶಿಗಳಾದ ಮೋಹನ್ ರಾಜ್ ಕೆ ಆರ್, ಮನೋಜ ಅಚಾರ್ಯ,ಮುಖಂಡರಾದ ಚಂದ್ರಶೇಖರ್ ಉಚ್ಚಿಲ್,ಹರಿಯಪ್ಪ ಸಾಲ್ಯಾನ್, ಚಂದ್ರಹಾಸ್ ಪಂಡಿತ್ ಹೌಸ್,ಹೇಮಂತ್ ಶೆಟ್ಟಿ ಮೊದಲಾದವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News