ನಾಳೆಯಿಂದ ನೆಫ್ಟ್, ಆರ್‌ಟಿಜಿಎಸ್ ಮೂಲಕ ಹಣ ವರ್ಗಾವಣೆ ಅಗ್ಗ

Update: 2019-06-30 14:46 GMT

ಮುಂಬೈ,ಜೂ.30: ಆರ್‌ಟಿಜಿಎಸ್ ಮತ್ತು ನೆಫ್ಟ್ ವ್ಯವಸ್ಥೆಗಳ ಮೂಲಕ ಹಣ ವರ್ಗಾವಣೆಗೆ ತನ್ನ ಯಾವುದೇ ಶುಲ್ಕವನ್ನು ವಿಧಿಸದಿರಲು ಆರ್‌ಬಿಐ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಈ ಸೌಲಭ್ಯಗಳು ಸೋಮವಾರದಿಂದ ಅಗ್ಗವಾಗಲಿವೆ.

ಜು.1ರಿಂದ ಆರ್‌ಟಿಜಿಎಸ್ ಮತ್ತು ನೆಫ್ಟ್ ಶುಲ್ಕಗಳ ಮನ್ನಾ ಪ್ರಕಟಿಸಿದ ಬಳಿಕ ಆರ್‌ಬಿಐ,ಅದೇ ದಿನದಿಂದ ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ಬ್ಯಾಂಕುಗಳಿಗೆ ಸೂಚಿಸಿದೆ.

ಡಿಜಿಟಲ್ ವಹಿವಾಟುಗಳಿಗೆ ಒತ್ತು ನೀಡುವ ಉದ್ದೇಶದಿಂದ ಆರ್‌ಟಿಜಿಎಸ್ ಮತ್ತು ನೆಫ್ಟ್ ಸೌಲಭ್ಯಗಳಿಗೆ ಯಾವುದೇ ಶುಲ್ಕ ವಿಧಿಸದಿರಲು ಆರ್‌ಬಿಐ ನಿರ್ಧರಿಸಿದೆ. ಇದರಿಂದ ಬ್ಯಾಂಕುಗಳು ಈ ವ್ಯವಹಾರಗಳಿಗೆ ಗ್ರಾಹಕರಿಗೆ ವಿಧಿಸುವ ಶುಲ್ಕವನ್ನು ತಗ್ಗಿಸಲು ನೆರವಾಗಲಿದೆ ಎಂದು ಭಾರತೀಯ ಬ್ಯಾಂಕುಗಳ ಸಂಘ(ಐಬಿಎ)ದ ಅಧ್ಯಕ್ಷ ಸುನಿಲ ಮೆಹ್ತಾ ತಿಳಿಸಿದ್ದಾರೆ.

ದೇಶದ ಅತ್ಯಂತ ದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ ಸದ್ಯ ನೆಫ್ಟ್‌ಗೆ 1ರಿಂದ 5ರೂ. ಮತ್ತು ಆರ್‌ಟಿಜಿಎಸ್‌ಗೆ 5ರಿಂದ 50 ರೂ.ಶುಲ್ಕ ವಿಧಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News