×
Ad

ದೇಶ ಪ್ರತಿನಿಧಿಸುವ ನಿಯೋಗಕ್ಕೆ ಸುರತ್ಕಲ್ ದೀಕ್ಷಾ ಶೆಟ್ಟಿ ಆಯ್ಕೆ

Update: 2019-06-30 20:42 IST

ಮಂಗಳೂರು, ಜೂ.30: ಕೇಂದ್ರ ಸರಕಾರದ ಯುವಜನ ಸೇವಾ ಹಾಗೂ ಕ್ರೀಡಾ ಸಚಿವಾಲಯದ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಡಿಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸುವ ನಿಯೋಗಕ್ಕೆ ಸುರತ್ಕಲ್ ಬಾಳದ ದೀಕ್ಷಾ ಎಂ. ಶೆಟ್ಟಿ ಆಯ್ಕೆಯಾಗಿದ್ದಾರೆ.

ದೀಕ್ಷಾ ಅವರನ್ನೊಳಗೊಂಡ ನಿಯೋಗ ಜು.2ರಿಂದ 9ರವರೆಗೆ ಚೀನಾಕ್ಕೆ ಭೇಟಿ ನೀಡಲಿದೆ. ಭಾರತದ ವಿವಿಧ ಭಾಗಗಳಿಂದ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳು ಈ ನಿಯೋಗದಲ್ಲಿ ಪಾಲ್ಗೊಳ್ಳಲಿದ್ದಾರೆ. ಚೀನಾದ ಯುವ ಜನತೆಗೆ ದೀಕ್ಷಾ ಅವರು ರಾಜ್ಯದ ಜಾನಪದ ನೃತ್ಯ ಪ್ರಕಾರವಾದ ಪೂಜಾ ಕುಣಿತ ಹಾಗೂ ಕರಾವಳಿಯ ಹೆಮ್ಮೆಯ ಯಕ್ಷಗಾನದ ಪರಿಚಯ ಮಾಡಿಕೊಡಲಿದ್ದಾರೆ.

ದೀಕ್ಷಾ ಸುರತ್ಕಲ್‌ನ ಗೋವಿಂದದಾಸ ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿದ್ದು, ಪ್ರಸ್ತುತ ಮೈಸೂರಿನ ಜೆಎಸ್‌ಎಸ್ ಅಕಾಡಮಿ ಆ್ ಹೈಯರ್ ಎಜುಕೇಶನ್ ಆ್ಯಂಡ್ ರಿಸರ್ಚ್ (ಡೀಮ್ಡ್ ಟು ಬಿ ಯೂನಿವರ್ಸಿಟಿ)ಯಲ್ಲಿ ಹಾಸ್ಪಿಟಲ್ ಆಡ್ಮಿನಿಸ್ಟ್ರೇಶನ್ ಅಧ್ಯಯನ ನಡೆಸುತ್ತಿದ್ದಾರೆ. ದೀಕ್ಷಾ ಅವರು ಸುರತ್ಕಲ್ ಬಾಳದ ಯಕ್ಷ ಕಲಾವಿದ, ಯಕ್ಷಗಾನ ಸಂಘಟಕ ಮಾಧವ ಎಸ್. ಶೆಟ್ಟಿ ಬಾಳ ಹಾಗೂ ಮೀರವಾಣಿ ಎಂ. ಶೆಟ್ಟಿ ಅವರ ಪುತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News