×
Ad

ಕೊಣಾಜೆ: ಜಮಾಅತೇ ಇಸ್ಲಾಂ ವತಿಯಿಂದ ಕೊಳವೆ ಬಾವಿ ಸಮರ್ಪಣೆ

Update: 2019-06-30 21:13 IST

ಕೊಣಾಜೆ: ಜನರಿಗೆ ಕುಡಿಯಲು ನೀರು ಒದಗಿಸುವುದು ಮಹಾಧರ್ಮ. ಜಮಾಅತೇ ಇಸ್ಲಾಮೀ‌ ಹಿಂದ್ ಅತ್ಯುತ್ತಮ ಸಂಘಟನೆಯಾಗಿದ್ದು ಸಂಘಟನೆಯವರಾಡುವ ಮಾತು ಕೇವಲ ತೋರ್ಪಡಿಕೆಯಲ್ಲ, ಒಳ್ಳೆಯ ಮನಸ್ಸು ಇದೆ ಎಂದು ಹರೇಕಳ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ರೈ ಕಲ್ಲಿಮಾರ್ ಅಭಿಪ್ರಾಯಪಟ್ಟರು.

ಜಮಾಅತೇ ಇಸ್ಲಾಮೀ‌ ಹಿಂದ್ ಸಮಾಜ ಸೇವಾ ಘಟಕ ಹಾಗೂ ಕೊಣಾಜೆ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಕೊಣಾಜೆಯಲ್ಲಿ ನಿರ್ಮಿಸಲಾದ ಸಾರ್ವಜನಿಕ ಕೊಳವೆ ಬಾವಿ ಸಾರ್ವಜನಿಕರಿಗೆ ಸಮರ್ಪಿಸಿ ಮಾತನಾಡಿದರು.

ಕೊಣಾಜೆ ಗ್ರಾಮಸ್ಥರು ಎಂದಿಗೂ ಜಾತಿ, ಧರ್ಮಕ್ಕೆ ಚ್ಯುತಿ ಬರದಂತೆ ಜೀವನ ಸಾಗಿಸಿಕೊಂಡು ಬಂದಿದ್ದು ಇಲ್ಲಿ ಜೀವಿಸುವವರು ಭಾಗ್ಯವಂತರು. ಅಭಿವೃದ್ಧಿಯಲ್ಲಿ ಪಕ್ಷ, ಬೇಧ ಮರೆತಿರವ ಕಾರಣ ಗ್ರಾಮ ಅಭಿವೃದ್ಧಿಯಲ್ಲಿ ಮುನ್ನಡೆಯುತ್ತಿದೆ. ಸಂಸ್ಥೆ ನೀಡಿರುವ ನೀರು ಹತ್ತು ಮನೆಗಳಿಗೆ ಉಪಯೋಗ ಆಗಬೇಕಿದ್ದು , ದುರುಪಯೋಗಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು.

ತೊಕ್ಕೊಟ್ಟು ಮಸ್ಜಿದುಲ್ ಹುದಾ ಖತೀಬ್ ಮಹಮ್ಮದ್ ಕುಂಞಿ‌ ಮಾತನಾಡಿ, ಕೊಳವೆ ಬಾವಿಯಲ್ಲಿ ಉತ್ತಮ ನೀರು ಸಿಕ್ಕಿರುವುದು ದೇವನ ಅನುಗ್ರಹ. ನೀರು ಹೆಚ್ಚಾದರೂ, ಕಡಿಮೆಯಾದರೂ ಸಮಸ್ಯೆ ಇದೆ. ಈ ಕಾರಣಕ್ಕೆ ನೀರು ಸೂಕ್ಷ್ಮ ವಸ್ತು. ಎಲ್ಲಾ ಧರ್ಮೀಯರನ್ನು ಒಂದುಗೂಡಿಸುವ ಶಕ್ತಿ ನೀರಿಗಿದೆ ಎನ್ನುವುದಕ್ಕೆ ಕಳೆದ ಬಾರಿ‌ ಕೇರಳದಲ್ಲಿ ನಡೆದ ಪ್ರಕೃತಿ ವಿಕೋಪ‌ ತೋರಿಸಿಕೊಟ್ಟಿದೆ ಎಂದು ತಿಳಿಸಿದರು.

ಮೂಡಾದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಉಳ್ಳಾಲ ವಲಯ ಜಮಾಅತೇ ಇಸ್ಲಾಮೀ ಅಧ್ಯಕ್ಷ ಅಬ್ದುಲ್ ರಹೀಂ, ಸಮಾಜ ಸೇವಾ‌ ವಿಭಾಗ ಸಂಚಾಲಕ ಅಬ್ದುಲ್ ಸಲಾಂ, ತೊಕ್ಕೊಟ್ಟು ಮಸ್ಜಿದುಲ್ ಹುದಾ ಖತೀಬ್ ಮಹಮ್ಮದ್ ಕುಂಞಿ, ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಝರ್  ಷಾ ಪಟ್ಟೋರಿ, ಮಾಜಿ ಅಧ್ಯಕ್ಷ ಶೌಕತ್ ಅಲಿ, ಗ್ರಾ.ಪಂ. ಸದಸ್ಯರಾದ ಅಚ್ಚುತ ಗಟ್ಟಿ, ಮುತ್ತು ಶೆಟ್ಟಿ, ವೇದಾವತಿ ಗಟ್ಟಿ, ರಾಮಚಂದ್ರ ಗಟ್ಟಿ, ಅಭಿವೃದ್ಧಿ ಅಧಿಕಾರಿ ಸವಿತಾ, ಮಾಜಿ ಸದಸ್ಯ ಹಸನ್ ಕುಂಞಿ, ತಾಲೂಕು ಪಂಚಾಯಿತಿ ಸದಸ್ಯೆ ಪದ್ಮಾವತಿ ಪೂಜಾರಿ, ಮಂಗಳಾ ಗ್ರಾಮೀಣ ಯುವಕ ಸಂಘದ ಸ್ಥಾಪಕಾಧ್ಯಕ್ಷ ಅಬ್ದುಲ್ ರಹ್ಮಾನ್ ಕೋಡಿಜಾಲ್, ಮಂಗಳಾ ಗ್ರಾಮೀಣ ಯುವಕ ಸಂಘದ ಅಧ್ಯಕ್ಷ ಅಬ್ದುಲ್ ರಹ್ಮಾನ್ ಎ.ಕೆ., ಪದ್ಮನಾಭ ಗಟ್ಟಿ, ಅಮೀರ್ ಹುಸೈನ್, ಇಕ್ಬಾಲ್‌ ಕೊಣಾಜೆ, ಹಸೈನಾರ್ ಕೊಣಾಜೆ, ವೈಎಫ್ ಸಿ ಕೊಣಾಜೆ ಹಾಗೂ ಕೋಡಿಜಾಲ್ ಖಿದ್ಮತುಲ್‌ ಇಸ್ಲಾಂ ಅಸೋಸಿಯೇಸಿಯೇಶನ್ ಪದಾಧಿಕಾರಿಗಳು  ಉಪಸ್ಥಿತರಿದ್ದರು.

ಸಮಾಜ ಸೇವಾ ವಿಭಾಗ ಸಂಚಾಲಕ ಅಬ್ದುಲ್ ಸಲಾಂ ವಂದಿಸಿದರು. ಮುಝಮ್ಮಿಲ್ ಕಾರ್ಯಕ್ರಮ ನಿರೂಪಿಸಿದರು.

'ನೀರು ದೇವನು ನೀಡಿರುವ ಬಹುದೊಡ್ಡ ಕೊಡುಗೆ, ಜಗತ್ತಿನಲ್ಲಿ ಯಾವ ಕಾರ್ಖಾನೆ ನಡೆಯಬೇಕಾದರೂ ನೀರು ಬೇಕು, ಆದರೆ ನೀರು ಉತ್ಪಾದಿಸುವ ಒಂದೇ‌ ಒಂದು ಕಾರ್ಖಾನೆಯೂ ಇಲ್ಲ, ನೀರು ಉತ್ಪಾದನೆ ಯಾವುದೇ ವಿಜ್ಞಾನಿಯಿಂದ ಸಾಧ್ಯವಾಗಿಲ್ಲ'
- ಮಹಮ್ಮದ್ ಕುಂಞಿ, ಖತೀಬ್, ಮಸ್ಜಿದುಲ್ ಹುದಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News