×
Ad

ಮಂಗಳೂರು: ಐಎಂಎ ಯಿಂದ ವೈದ್ಯರ ದಿನಾಚರಣೆ

Update: 2019-06-30 21:30 IST

ಮಂಗಳೂರು, ಜೂ. 30: ಭಾರತೀಯ ವೈದ್ಯಕೀಯ ಸಂಘದ ದ.ಕ. ಜಿಲ್ಲಾ ಘಟಕ, ಐ.ಎಂ.ಎ. ಟ್ರಸ್ಟ್ ಮತ್ತು ಎ.ಎಂ.ಸಿ. ಸಹಭಾಗಿತ್ವದಲ್ಲಿ ವೈದ್ಯರ ದಿನಾಚರಣೆಯು ರವಿವಾರ ನಗರದ ಐ.ಎಂ.ಎ. ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಐ.ಎಂ.ಎ ಸ್ಥಾಪಕ ಅಧ್ಯಕ್ಷ  ಡಾ. ಕೆ.ವಿ.ದೇವಾಡಿಗ, ಭಾರತದಲ್ಲಿ ವೈದ್ಯರ ಮೇಲೆ ನಿರಂತರ ಹಲ್ಲೆ ನಡೆಯುತ್ತಿದ್ದು, ಅಭದ್ರತೆಯ ವಾತಾವರಣವೂ ಇದೆ.  ಹಾಗಾಗಿ ವೈದ್ಯರಿಗೆ ರಕ್ಷಣೆ ನೀಡಬೇಕು  ಎಂದು ಅಗ್ರಹಿಸಿದರು. 

ರಾಜಕೀಯ ಕಾರಣದಿಂದಾಗಿ ವೈದ್ಯರಿಗೆ ಸಂಕಷ್ಟ ಉಂಟಾಗಿದೆ. ಇತ್ತೀಚೆಗೆ ವೈದ್ಯರು ನಡೆಸಿದ ಹೋರಾಟ ಒಗ್ಗಟ್ಟನ್ನು  ತೋರಿಸುತ್ತದೆ  ಎಂದರು. ಈ ಸಂದರ್ಭ ಹಿರಿಯ ವೈದ್ಯ ಡಾ. ಯಶವಂತ್ ಪಿ.ಆರ್,ಡಾ. ಶುಭಕರ್ ಭಂಡಾರಿ, ಡಾ. ಮುಹಮ್ಮದ್ ಇಸ್ಮಾಯಿಲ್, ಡಾ. ಅಮೃತ ಭಂಡಾರಿ, ಡಾ. ರವೀಂದ್ರ ಕೆ ಹಾಗೂ ಡಾ. ಎಮ್ ಎಮ್ ಶರೀಫ್. ಅವರನ್ನು ಸನ್ಮಾನಿಸಲಾಯಿತು.

ಐ. ಎಂ. ಎ. ನ ವಾರ್ಷಿಕ ವಿಶೇಷಾಂಕ 'ಮೆಡಿಲೂರ್' ನ್ನು ಡಾ.ಕೆ.ವಿ. ದೇವಾಡಿಗ ಬಿಡುಗಡೆ ಮಾಡಿದರು. 

ಕಾರ್ಯಕ್ರಮದಲ್ಲಿ ಐಎಮ್ ಎ ಟ್ರಸ್ಟ್ ನ ಅಧ್ಯಕ್ಷ  ಡಾ. ಹಬೀಬ್ ರಹ್ಮಾನ್, ಎ.ಎಮ್.ಸಿ ಅಧ್ಯಕ್ಷ ಡಾ. ಸಂದೀಪ್ ರೈ, ಸುಳ್ಯ ಘಟಕ ಅಧ್ಯಕ್ಷೆ ಡಾ. ಗೀತ ರೂಪಾ, ಪುತ್ತೂರು ಘಟಕಾಧ್ಯಕ್ಷ ಡಾ. ಗಣೇಶ್, ಬಂಟ್ಬಾಳ ಘಟಕಾಧ್ಯಕ್ಷ, ಡಾ. ಪ್ರದೀಪ್, ಸುರತ್ಕಲ್ ಘಟಕಾಧ್ಯಕ್ಷ ಡಾ. ಆರ್.ಎನ್.‌ ಪಿಂಟೊ, ಚುನಾಯಿತ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್, ಕಾರ್ಯದರ್ಶಿ ಡಾ. ಸುದೀಂದ್ರ ರಾವ್, ಟ್ರಸ್ಟಿನ ಕಾರ್ಯದರ್ಶಿ ಡಾ. ಕೆ.ಅರ್.‌ಕಾಮತ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

 ಐಎಮ್ ಎ ಟ್ರಸ್ಟ್ ನ ಅಧ್ಯಕ್ಷ  ಡಾ. ಬಿ ಸಚ್ಚಿತಾನಂದಾ ರೈ ಸ್ವಾಗತಿಸಿದರು. ಖಜಾಂಜಿ ಡಾ. ವಿನಯ್ ಕುಮಾರ್ ವಂದಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News