ಉಷ್ಣಮಾರುತಕ್ಕೆ ಯುರೋಪ್ ತತ್ತರ: ಫ್ರಾನ್ಸ್,ಸ್ಪೇನ್‌ನಲ್ಲಿ ಪರಿಸ್ಥಿತಿ ಗಂಭೀರ

Update: 2019-06-30 17:38 GMT

 ಪ್ಯಾರಿಸ್,ಜೂ.30: ಯುರೋಪ್‌ನ ವಿವಿಧೆಡೆ ಉಷ್ಣ ಮಾರುತದ ಪ್ರಕೋಪ ಮುಂದುವರಿದಿದ್ದು ಫ್ರಾನ್ಸ್, ಸ್ಪೇನ್ ಸೇರಿದಂತೆ ತಾಪಮಾನವು ದಾಖಲೆಯ ಏರಿಕೆಯನ್ನು ಕಂಡಿದೆ. ಇಟಲಿಯಲ್ಲಿ ಬಿಸಿಲಿನ ತಾಪಮಾನದಿಂದಾಗಿ ಕನಿಷ್ಠ ಮೂವರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

 ಫ್ರಾನ್ಸ್‌ನ ಗಾರ್ಡ್ ಪ್ರಾಂತದಲ್ಲಿ 45.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು ಆ ದೇಶದಲ್ಲೇ ಇದು ಗರಿಷ್ಠವಾಗಿದೆ. ಉಷ್ಣಮಾರುತದಿಂದಾಗಿ ಫ್ರಾನ್ಸ್‌ನ ವಿವಿಧೆಡೆ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, 1500ಕ್ಕೂ ಅಧಿಕ ವಿಸ್ತೀರ್ಣದ ಕಾಡುಗಳಲ್ಲಿ ಬೆಂಕಿ ಹೊತ್ತಿಕೊಡು ಉರಿಯುತ್ತಿದೆ. ಹಲವಾರು ಮನೆಗಳು ಹಾಗೂ ವಾಹನಗಳು ಅಗ್ನಿಗೆ ಆಹುತಿಯಾಗಿರುವ ತುರ್ತುಸೇವೆಗಳ ಇಲಾಖೆ ತಿಳಿಸಿದೆ.

    ಗಾರ್ಡ್‌ನಲ್ಲಿ 700ಕ್ಕೂ ಅಧಿಕ ಅಗ್ನಿಶಾಮಕದಳದ ವಾಹನಗಳು ಹಾಗೂ 10 ವಿಮಾನಗಳು ಕಾಡ್ಗಿಚ್ಚನ್ನು ನಿಯಂತ್ರಿಸಲು ಹರಸಾಹಸ ನಡಡೆಸುತ್ತಿವೆ. ಕಾರ್ಯಾಚರಣೆಯಲ್ಲಿ ಹಲವಾರು ಅಗ್ನಿಶಾಮಕದಳದ ಸಿಬ್ಬಂದಿಗೆ ಗಾಯಗಳಾಗಿವೆ.

ಸ್ಪೇನ್‌ನ 50 ಪ್ರಾಂತಗಳು ಕೂಡಾ ತೀವ್ರವಾದ ತಾಪಮಾನದಿಂದ ತತ್ತರಿಸುತ್ತಿದ್ದು, ಅವುಗಳಲ್ಲಿ ಏಳು ಅತ್ಯಂತ ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸುತ್ತಿವೆಯೆಂದು ರಾಷ್ಟ್ರೀಯ ಹವಾಮಾನ ಇಲಾಖೆ ತಿಳಿಸಿದೆ.

2019ನೇ ಇಸವಿಯು ಜಗತ್ತಿನ ಅತ್ಯಂತ ತೀವ್ರ ತಾಪಮಾನದ ವರ್ಷಗಳ ಸಾಲಿಗೆ ಸೇರ್ಪಡೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News