ಪಾಕ್‌ನಿಂದ 21 ಉಗ್ರರ ಬಂಧನ

Update: 2019-06-30 18:09 GMT

 ಲಾಹೋರ್,ಜೂ.30: ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿ ಕಳೆದ ಒಂದು ತಿಂಗಳಿನಿಂದ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಪಾಕ್ ಕಾನೂನು ಅನುಷ್ಠಾನ ಏಜೆನ್ಸಿಗಳು ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಐಸಿಸ್,ಲಷ್ಕರೆ ಜಾಂಗ್ವಿ (ಎಲ್‌ಇಜೆ) ಹಾಗೂ ತೆಹ್ರಿಕೆ ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಗುಂಪುಗಳಿಗೆ ಸೇರಿದ 21 ಮಂದಿ ಉಗ್ರರನ್ನು ಬಂಧಿಸಲಾಗಿದೆ.

   ಐಸಿಸ್, ಎಲ್‌ಇಜೆ ಹಾಗೂ ಟಿಟಿಪಿ ಗುಂಪುಗಳಿಗೆ ಸೇರಿದ 21 ಮಂದಿ ಭಯೋತ್ಪಾದಕರನ್ನು ಮುಲ್ತಾನ್, ಭಹವಾಲ್‌ನಗರ್, ಭಹವಾಲ್‌ಪುರ, ಟೋಬಾ ಟೆಕ್ ಸಿಂಗ್, ಗುರ್ಜನ್‌ವಾಲಾ ಹಾಗೂ ಸಿಯಾಲ್‌ಕೋಟ್‌ನಲ್ಲಿ ಬಂಧಿಸಲಾಗಿದೆಯೆಂದು ಪಂಜಾಬ್ ಪೊಲೀಸ್ ದಳದ ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ರವಿವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

 ಕಾರ್ಯಾಚರಣೆಯಲ್ಲಿ ಉಗ್ರರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು, ಸ್ಫೋಟಕಗಳು, ವಿವಿಧ ಸ್ಥಳಗಳ ನಕ್ಷೆಗಳು ಹಾಗೂ ಭಾರೀ ಮೊತ್ತದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಭಯೋತ್ಪಾದಕರು ಈ ಪ್ರದೇಶಗಳಲ್ಲಿ ಪಾಕ್ ಕಾನೂನು ಅನುಷ್ಠಾನ ಏಜೆನ್ಸಿಗಳ ಸಿಬ್ಬಂದಿ ಮೇಲೆ ದಾಳಿ ನಡೆಸಲು ಸಂಚುಹೂಡಿದ್ದರು ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News