ಟ್ರಂಪ್ ಕುರಿತ ವ್ಯಂಗ್ಯಚಿತ್ರಕ್ಕಾಗಿ ವ್ಯಂಗ್ಯಚಿತ್ರಕಾರ ವಜಾ

Update: 2019-07-01 18:15 GMT

ಒಟ್ಟಾವ (ಕೆನಡ), ಜು. 1: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಗ್ಗೆ ರಚಿಸಿದ ವ್ಯಂಗ್ಯಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರಗೊಂಡ ಬಳಿಕ, ಕೆನಡದ ವ್ಯಂಗ್ಯಚಿತ್ರಕಾರ ಮೈಕಲ್ ಡಿ ಆ್ಯಡರ್‌ರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

ಕೆನಡದ ನ್ಯೂ ಬ್ರನ್ಸ್‌ವಿಕ್ ರಾಜ್ಯದಲ್ಲಿ ನಾನು ಗುತ್ತಿಗೆ ಹೊಂದಿದ್ದ ನಾಲ್ಕು ಪತ್ರಿಕೆಗಳು ನನ್ನನ್ನು ‘ಕಳುಹಿಸಿ ಕೊಟ್ಟಿವೆ’ ಎಂಬುದಾಗಿ ಅವರು ಟ್ವಿಟರ್‌ನಲ್ಲಿ ಶನಿವಾರ ಹೇಳಿದ್ದಾರೆ.

ಇತ್ತೀಚೆಗೆ ಮೆಕ್ಸಿಕೊದಿಂದ ಅಮೆರಿಕವನ್ನು ಪ್ರವೇಶಿಸುವ ವೇಳೆ ನದಿಯೊಂದರಲ್ಲಿ ಮುಳುಗಿ ಮೃತಪಟ್ಟ ಎಲ್ ಸಾಲ್ವಡೊರ್‌ನ ವಲಸಿಗ ರಮಿರೇಝ್ ಮತ್ತು ಅವರ ಎರಡು ವರ್ಷದ ಮಗಳ ಚಿತ್ರವನ್ನು ಆಧರಿಸಿ ಅವರು ವ್ಯಂಗ್ಯಚಿತ್ರ ಬಿಡಿಸಿದ್ದರು.

ಅವರು ಬ್ರನ್ಸ್‌ವಿಕ್ ನ್ಯೂಸ್ ಇಂಕ್ (ಬಿಎನ್‌ಐ) ಸಂಸ್ಥೆಗಾಗಿ ಕೆಲಸ ಮಾಡುತ್ತಿದ್ದರು. ಈ ಸಂಸ್ಥೆಯು ನಾಲ್ಕು ಪತ್ರಿಕೆಗಳನ್ನು ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News