ಭಾರತೀಯರಿಗೆ ಬಾಗಿಲು ತೆಗೆದ 500 ವರ್ಷ ಹಿಂದಿನ ಪಾಕ್ ಗುರುದ್ವಾರ

Update: 2019-07-01 18:16 GMT

ಲಾಹೋರ್, ಜು. 1: ಪಾಕಿಸ್ತಾನದ ಪಂಜಾಬ್ ಪ್ರಾಂತದ ಸಿಯಾಲ್‌ಕೋಟ್‌ನಲ್ಲಿರುವ 500 ವರ್ಷಗಳ ಹಿಂದಿನ ಗುರುದ್ವಾರವೊಂದು ಭಾರತೀಯ ಸಿಖ್ ಯಾತ್ರಿಕರಿಗಾಗಿ ಬಾಗಿಲು ತೆರೆದಿದೆ ಎಂದು ಮಾಧ್ಯಮ ವರದಿಯೊಂದು ಸೋಮವಾರ ತಿಳಿಸಿದೆ.

ಈ ಮೊದಲು, ಲಾಹೋರ್‌ನಿಂದ 140 ಕಿ.ಮೀ. ದೂರದಲ್ಲಿರುವ ಬಬೆ-ಡೆ-ಬೇರ್ ಗುರುದ್ವಾರವನ್ನು ಸಂದರ್ಶಿಸಲು ಭಾರತೀಯರಿಗೆ ಅವಕಾಶವಿರಲಿಲ್ಲ ಎಂದು ‘ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.

ಈ ಗುರುದ್ವಾರವನ್ನು ಸಂದರ್ಶಿಸಲು ಪಾಕಿಸ್ತಾನ, ಯುರೋಪ್, ಕೆನಡ ಮತ್ತು ಅಮೆರಿಕಗಳ ಯಾತ್ರಿಕರಿಗೆ ಅವಕಾಶವಿದೆ.

ಈ ಪಟ್ಟಿಗೆ ಭಾರತೀಯ ಸಿಖ್ ಯಾತ್ರಿಕರನ್ನೂ ಸೇರಿಸುವಂತೆ ಪಂಜಾಬ್ ಗವರ್ನರ್ ಮುಹಮ್ಮದ್ ಸರ್ವಾರ್ ರಾಜ್ಯದ ಔಕಾಫ್ ಇಲಾಖೆಗೆ ಸೂಚನೆ ನೀಡಿದ್ದರು ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News