ಜು.13ರಂದು ಮದರಂಗಿದ ರಂಗ್ ಕಾರ್ಯಕ್ರಮ

Update: 2019-07-02 15:12 GMT

ಉಡುಪಿ, ಜು.2: ಉಡುಪಿ ತುಳುಕೂಟದ ವತಿಯಿಂದ ಮದರಂಗಿದ ರಂಗ್ ಕಾರ್ಯಕ್ರಮವನ್ನು ಜು.13ರಂದು ಮಧ್ಯಾಹ್ನ 2 ಗಂಟೆಗೆ ಉಡುಪಿಯ ಅಮ್ಮಣ್ಣಿ ರಾಮಣ್ಣಿ ಶೆಟ್ಟಿ ಸಭಾಭವನದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಶಾಲಾಕಾಲೇಜು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿಶೇಷ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. 1-5ನೆ ತರಗತಿಯ ಮಕ್ಕಳಿಗೆ ತಾಳೆಗರಿಯಿಂದ ಆಟದ ವಸ್ತುಗಳನ್ನು ತಯಾರಿಸುವುದು, ಹಲಸಿನ ಬೀಜದ ಸಿಪ್ಪೆತೆಗೆಯುವುದು. 5-7ನೇ ತರಗತಿಯ ಮಕ್ಕಳಿಗೆ ಕೆಸುವಿನ ಎಲೆಯಿಂದ ಬಕೆಟ್‌ಗೆ ನೀರು ತುಂಬಿಸುವುದು, ಎಲೆಯಿಂದ ಮಾಡಿದ ಪೀಪಿ ಊದು ವುದು, 8-10ನೇ ತರಗತಿಯವರಿಗೆ ಬೆಂಕಿ ಇಲ್ಲದೇ ಅಡಿಗೆ ಮಾಡುವುದು, ಮದಿ್ದನ ಎಲೆಯ ಹೆಸರು ಬರೆಯುವುದು.

ಕಾಲೇಜು ಮಕ್ಕಳಿಗೆ ತುಳುನಾಡಿನ ಉಡುಗೆ ತೊಡುಗೆಯ ಅಲಂಕಾರ ಮತ್ತು ಸಾರ್ವಜನಿಕ ವಿಭಾಗದಲ್ಲಿ ಹೆಂಗಸರಿಗೆ ಹೂ ಕಟ್ಟುವುದು, ಬತ್ತಿ ಕಟ್ಟುವುದು, ರಂಗೋಲಿ, ವಸ್ತ್ರಾಲಂಕಾರ ಹಾಗೂ ಗಂಡಸರಿಗೆ ವಸ್ತ್ರಾಲಂಕಾರ, ಪೀಪಿ ಊದುವುದು. ಎಲ್ಲಾ ವಿಭಾಗದವರಿಗೆ ಕೈಗೆ ಸಾಂಪ್ರದಾಯಿಕವಾಗಿ ಮದರಂಗಿ ಇಡುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ವಿಜೇತರಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುವುದು.

ಕಾರ್ಯಕ್ರಮವನ್ನು ನಿವೃತ್ತ ಸೈನಿಕ ಶಿಕ್ಷಕಿ ತುಳಸಿ ದೇವಾಡಿಗ, ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಜಾನೆಟ್ ಬರ್ಬೋಜಾ, ಅನುಪಮ ಮಹಿಳಾ ಮಾಸಿಕ ಪತ್ರಿಕೆಯ ಸಹಸಂಪಾದಕಿ ಕುಲ್‌ಸೂಮ್ ಅಬೂಬಕ್ಕರ್ ಉದ್ಘಾಟಿಸಲಿ ರುವರು. ಮದರೆಂಗಿಯ ಬಗ್ಗೆ ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಮಾತನಾಡಲಿರು ವರು. ತುಳುಕೂಟದ ಅಧ್ಯಕ್ಷ ವಿ.ಜಿ.ಶೆಟ್ಟಿ ಅಧ್ಯಕ್ಷತೆ ವಹಿಸಲಿರುವರು ಎಂದು ಕಾರ್ಯಕ್ರಮದ ಸಂಚಾಲಕರಾದ ಯಶೋದಾ ಕೇಶವ್ ಹಾಗೂ ಜ್ಯೋತಿ ಎಸ್.ದೇವಾಡಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News