ಅಂತಾರಾಷ್ಟ್ರೀಯ ಮಾದಕ ವಸ್ತುಗಳ ದುರ್ಬಳಕೆ ವಿರೋಧಿ, ಅಕ್ರಮ ಕಳ್ಳಸಾಗಾಣಿಕೆ ತಡೆ ದಿನಾಚರಣೆ

Update: 2019-07-02 15:17 GMT

ಮಂಗಳೂರು, ಜು.2: ದ.ಕ.ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಮಾನಸಿಕ ಆರೋಗ್ಯ ವಿಭಾಗ), ನಗರ ಮತ್ತು ಜಿಲ್ಲಾ ಪೊಲೀಸ್ ಇಲಾಖೆ, ರೊಝಾರಿಯೋ ಪದವಿ ಪೂರ್ವ ಕಾಲೇಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮತ್ತು ಸಿಐಎಸ್‌ಎ್ (ಎಂಆರ್‌ಪಿಎಲ್ ಯೂನಿಟ್) ಮಂಗಳೂರು ಇವುಗಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ದುರ್ಬಳಕೆ ವಿರೋಧಿ ಹಾಗೂ ಅಕ್ರಮ ಕಳ್ಳಸಾಗಾಣಿಕೆ ತಡೆಗಟುವ ದಿನಾಚರಣೆಯು ಮಂಗಳವಾರ ನಗರದ ರೊಝಾರಿಯೋ ಸಭಾಭವನದಲ್ಲಿ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣಾಚಾಯಧ ಮಾದಕ ವಸ್ತುಗಳ ಕುರಿತು ವಿದ್ಯಾರ್ಥಿ ಸಮೂಹದಲ್ಲಿ ಜಾಗೃತಿ ಮೂಡಿಸುವ ಮೂಲಕ ಧನಾತ್ಮಕ ಸಮಾಜದ ನಿರ್ಮಾಣ ಮಾಡುವ ಹೊಣೆಗಾರಿಕೆ ಎಲ್ಲರಿಗೂ ಇವೆ. ಸಂಘ ಸಂಸ್ಥೆಗಳು,ಕುಟುಂಬ ವ್ಯವಸ್ಥೆ, ವೈದ್ಯರ ಸಹಿತ ಎಲ್ಲರೂ ಇಂತಹ ಸೇವೆಯಲ್ಲಿ ಭಾಗಿಯಾಗಬೇಕು ಎಂದರು.

ಜಗತ್ತು ವೇಗದಿಂದ ಬದಲಾಗುತ್ತಿವೆ. ವಿದ್ಯಾರ್ಥಿ ಸಮೂಹ ಮೊಬೈಲ್‌ನಂತಹ ವಿಚಾರದಲ್ಲಿ ಜಾಸ್ತಿ ಮಗ್ನರಾಗಿರುವುದರಿಂದ ಬಲು ಬೇಗನೆ ಮಾದಕ ವ್ಯಸನಗಳಿಗೆ ಗುರಿಯಾಗುತ್ತಿದ್ದಾರೆ. ಜಿಲ್ಲೆಯ ವಿದ್ಯಾಸಂಸ್ಥೆಗಳು ಬಹಳಷ್ಟು ಹೆಸರುವಾಸಿಯಾಗಿದೆ. ಅದರ ಜತೆಯಲ್ಲಿ ಮಾದಕ ವ್ಯಸನಕ್ಕೂ ಇಲ್ಲಿನ ವಿದ್ಯಾರ್ಥಿಗಳು ಬಲಿಯಾಗುತ್ತಿರುವುದು ಕಳವಳಕಾರಿಯಾಗಿದೆ ಎಂದು ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣಾಚಾರ್ಯ ಹೇಳಿದರು.

ಮಾದಕ ವ್ಯಸನದಿಂದ ಬರೀ ವ್ಯಸನಿಯೊಬ್ಬರೇ ಬಲಿಯಾಗುವುದಿಲ್ಲ. ಇದರಿಂದ ಕುಟುಂಬ, ಸಮಾಜ ಎಲ್ಲರೂ ಬಲಿಯಾಗಬೇಕು. ಮುಖ್ಯವಾಗಿ ಕುಟುಂಬದ ಆರ್ಥಿಕ ಸ್ಥಿತಿ, ಸಾಮಾಜಿಕ ಸ್ಥಿತಿಯಲ್ಲೂ ಸಾಕಷ್ಟು ಬದಲಾವಣೆಯಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಹೆತ್ತವರು, ವೈದ್ಯರು, ಶಿಕ್ಷಕರು ಅವರನ್ನು ಕೌನ್ಸೆಲಿಂಗ್ ನಡೆಸಿ ನಂತರ ಸರಿಯಾದ ದಾರಿಯಲ್ಲಿ ಸಾಗಿಸುವ ಕೆಲಸವನ್ನು ಮಾಡುವ ಅಗತ್ಯವಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ ರಾವ್ ಮಾತನಾಡಿ ಆರೋಗ್ಯ ಪೂರ್ಣ ಜೀವನ ನಡೆಸುವ ಸಮಯದಲ್ಲಿ ಇಂತಹ ಮಾದಕ ವ್ಯಸನಗಳಿಗೆ ಬಲಿಯಾಗುವ ಮೂಲಕ ನಮ್ಮ ಆರೋಗ್ಯವನ್ನು ನಾವೇ ಕೈಯಾರೆ ಹಾಳು ಮಾಡುವುದು ಸರಿಯಲ್ಲ. ವಿದ್ಯಾರ್ಥಿಗಳಿಗೆ ಈ ಕುರಿತು ಜಾಗೃತಿ, ಮಾಹಿತಿಯನ್ನು ನೀಡುವ ಮೂಲಕ ಅವರನ್ನು ಸರಿದಾರಿಯಲ್ಲಿ ನಡೆಸುವ ಹೊಣೆಗಾರಿಕೆ ಎಲ್ಲರಿಗೂ ಇದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಡಾ. ಅನಿರುದ್ಧ ಶೆಟ್ಟಿ ಹಾಗೂ  ಮೃತ್ಯುಂಜಯ ಸ್ವಾಮಿ ಡಿ. ಭಾಗವಹಿಸಿದ್ದರು.

ಈ ಸಂದರ್ಭ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎ.ಜಿ. ಗಂಗಾಧರ್, ಸರಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ಡಾ. ರಾಜೇಶ್ವರಿ ದೇವಿ, ರೊಝಾರಿಯೋ ವಿದ್ಯಾ ಸಂಸ್ಥೆಗಳ ಸಂಚಾಲಕ ರೆ.ಫಾ. ಜೆ.ಬಿ.ಕ್ರಾಸ್ತಾ, ರೊಝಾರಿಯೋ ಪಿಯು ಕಾಲೇಜಿನ ಪ್ರಾಂಶುಪಾಲ ರೆ.ಫಾ. ವಿಕ್ಟರ್ ಡಿಸೋಜ, ರೊಝಾರಿಯೋ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅಲೋಶಿಯಸ್ ಡಿಸೋಜ ಉಪಸ್ಥಿತರಿದ್ದರು. ಡಾ. ರತ್ನಾಕರ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News