ಉಡುಪಿ ಜಿಲ್ಲೆಯಲ್ಲಿ ಟೋಪೋಗ್ರಾಫಿಕಲ್ ಸರ್ವೆ ಅಪರೇಷನ್ಸ್
ಉಡುಪಿ, ಜು.2: ಉಡುಪಿ ಜಿಲ್ಲೆಯಲ್ಲಿ ಸರ್ವೆ ಆಪ್ ಇಂಡಿಯಾದ ವತಿಯಿಂದ ಫೀಲ್ಡ್ ಸರ್ವೆ ಅಪರೇಷನ್ಸ್ ನಡೆಸಲು ತೀರ್ಮಾನಿಸಿದ್ದು, ಈ ಅಳತೆ ಕಾರ್ಯದ ಕುರಿತು ಸಾರ್ವಜನಿಕ/ಇಲಾಖಾ/ಅರೆ ಸರ್ಕಾರಿ/ ಸರ್ಕಾರಿ ವಲಯಗಳ ವಿವಿಧ ಹಂತದಲ್ಲಿ ಸಹಕಾರ ಅಗತ್ಯವಾಗಿದೆ.
ಅಳತೆ ಸಮಯದಲ್ಲಿ ಕಂದಾಯ, ಅರಣ್ಯ, ಲೋಕೋಪಯೋಗಿ ಇಲಾಖೆ, ಆರಕ್ಷಕ ಇಲಾಖೆ, ವೈದ್ಯಕೀಯ ಇಲಾಖೆ, ನಾಗರೀಕ ಸರಬರಾಜು, ನಗರಸಭೆ, ಪಂಚಾಯತ್‌ರಾಜ್, ಕೃಷಿ ಇಲಾಖಾ ಅಧಿಕಾರಿಗಳು ವಿವಿಧ ಹಂತಗಳಲ್ಲಿ ತಮ್ಮ ಇಲಾಖಾ ವ್ಯಾಪ್ತಿಗೆ ಸಂಬಂಧಿಸಿದಂತೆ ಸರ್ವೆಗೆ ಸಹಕರಿಸುವಂತೆ ಕೋರಲಾಗಿದೆ.
ಅಳತೆ ಸಮಯದಲ್ಲಿ ಸೂಕ್ತ ಕಟ್ಟಡಗಳು, ನೀರಿನ ಟ್ಯಾಂಕ್‌ಗಳು ಮತ್ತು ಎತ್ತರದ ಕಟ್ಟಡಗಳನ್ನು ಟೋಪೋ ಸ್ಟೇಷನ್‌ಗಳನ್ನಾಗಿ ಬಳಸಿಕೊಂಡು ಅಡವಿ ವೀಕ್ಷಣೆ ಮಾಡಲು ಅನುಮತಿ ನೀಡಬೇಕು, ವಿವಿಧ ಸಂಸ್ಥೆಗಳ ಆವರಣದಲ್ಲಿ ಪ್ರವೇಶಿಸಿ ಅಳತೆ ಕಾರ್ಯ ಪೂರೈಸಲು ಹಾಗೂ ಅಗತ್ಯವಿದ್ದರೆ ಸ್ಥಳಾಕೃತಿಯ ವಿವರಗಳನ್ನು ಪಡೆಯುವಲ್ಲಿ ಸಹಕಾರ ನೀಡಬೇಕು. ಅಗತ್ಯ ಸಂದರ್ಗಳಲ್ಲಿ ಪೊಲೀಸ್ ಸಹಕಾರ, ವೈದ್ಯಕೀಯ ಸಹಕಾರ ಒದಗಿಸುವಂತೆ ಉಡುಪಿ ಜಿಲ್ಲಾ ಭೂ ದಾಖಲೆಗಳ ಉಪ ನಿರ್ದೇಶಕರ ಪ್ರಕಟಣೆ ತಿಳಿಸಿದೆ.