×
Ad

ಕರ್ನಾಟಕ ಕೊಂಕಣಿ ಲೇಖಕರ ಸಂಘ ವತಿಯಿಂದ ಸಾಹಿತ್ಯ - ವಿಮರ್ಶೆ ವಿಚಾರಗೋಷ್ಠಿ

Update: 2019-07-02 23:18 IST

ಮಂಗಳೂರು: ವಿಮರ್ಶೆ ವಸ್ತುನಿಷ್ಟವಾಗಿರಬೇಕೇ ಹೊರತು ಯಾವುದೇ ಪೂರ್ವಾಗ್ರಹದಿಂದ ಕೂಡಿರಬಾರದು. ಉತ್ತಮ ವಿಮರ್ಶೆಯಿಂದ ಸಾಹಿತ್ಯದ ಅಭಿವೃದ್ಧಿ ಸಾಧ್ಯ. ವಿಮರ್ಶೆ ಸಾಹಿತ್ಯದ ಕೃತಿಗೆ ಸಂಬಂಧಪಟ್ಟಿದ್ದು ಇರಬೇಕೇ ಹೊರತು ಸಾಹಿತಿಗೆ ಸಂಬಂಧಪಟ್ಟಿರಬಾರದು ಎಂದು ಸಂತ ಅಲೋಶಿಯಸ್ ಕಾಲೇಜ್ ಕೊಂಕಣಿ ಸಂಸ್ಥೆ ಹಾಗೂ ಸಮೂಹ ಮಾದ್ಯಮ ಹಾಗೂ ಸಾರಂಗ್ ರೇಡಿಯೊ ನಿರ್ದೇಶಕರಾದ ವ. ಡಾ. ಮೆಲ್ವಿನ್ ಪಿಂಟೊ ಹೇಳಿದರು.

ಕರ್ನಾಟಕ ಕೊಂಕಣಿ ಲೇಖಕರ ಸಂಘ ಮಂಗಳೂರು ನಗರದ ಡೊನ್ ಬೊಸ್ಕೊ ಮಿನಿ ಸಭಾಂಗಣದಲ್ಲಿ ಏರ್ಪಡಿಸಿದ್ದ “ಸಾಹಿತ್ಯ ಮತ್ತು ವಿಮರ್ಶೆ” ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಅವರು ಮಾತನಾಡಿದರು. ಹಿರಿಯ ಸಾಹಿತಿ ವಲ್ಲಿ ವಗ್ಗ ಮೈಸೂರು ವಿಚಾರಗೋಷ್ಠಿ ಕಾರ್ಯಕ್ರಮವನ್ನು ನೆರವೇರಿಸಿದರು.

ಕೊಂಕಣಿ ಲೇಖಕರ ಸಂಘ ಕರ್ನಾಟಕ ಇದರ ಸಂಚಾಲಕರಾದ ರಿಚರ್ಡ್ ಮೊರಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಖ್ಯಾತ ಸಾಹಿತಿ ಡಾ. ಎಡ್ವರ್ಡ್ ನಜರೆತ್ ದಿಕ್ಸೂಚಿ ಭಾಷಣಗೈದು, ಲೇಖಕಿ ಲವಿ ಗಂಜಿಮಠ ವಂದಿಸಿದರು.

ಈ ಸಂದರ್ಭ ದಾಯ್ಜಿ ದುಬಾಯ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ವಲ್ಲಿ ವಗ್ಗ ಅವರಿಗೆ ಸನ್ಮಾನವನ್ನು ನೆರವೇರಿಸಲಾಯಿತು. ಡೊನಿ ಪಿರೇರಾ ಕಾರ್ಯಕ್ರಮ ನೆರವೇರಿಸಿದರು. ಹಿರಿಯ ಸಾಹಿತಿಗಳಾದ ಎಡಿ ನೆಟ್ಟೊ,  ಎಡ್ವಿನ್ ಜೆ.ಎಫ್. ಡಿಸೋಜಾ, ಡಾ. ಜೆರಿ ನಿಡ್ಡೋಡಿ, ಜೆ.ಎಫ್. ಡಿಸೋಜಾ, ಡೊಲ್ಫಿ ಕಾಸ್ಸಿಯಾ, ಸಿಜ್ಯೆಸ್ ತಾಕೊಡೆ, ರೊನ್ ರೊಚ್ ಕಾಸ್ಸಿಯಾ, ನವೀನ್ ಕುಲ್ಶೇಕರ್, ಪಾವ್ಲ್ ಮೊರಾಸ್ ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News