ಉಳ್ಳವರು ಇಲ್ಲದವರಿಗೆ ನೀಡುವುದೇ ದೊಡ್ಡ ಧರ್ಮ: ಜಿ.ಶಂಕರ್
ಉಡುಪಿ, ಜು.3: ಡ್ಯೂಸೆನ್ ಮಸ್ಕ್ಯುಲರ್ ಡಿಸ್ಟ್ರೋಪಿ ಕಾಯಿಲೆಯಿಂದ ನಡೆಯಲಾರದ ದುಸ್ಥಿತಿಯಲ್ಲಿರುವ ಉಡುಪಿಯ ಸರಳೆಬೆಟ್ಟುವಿನ ಪ್ರಮೀಳಾ ಪೂಜಾರಿಯ ಮಕ್ಕಳಾದ ಧನುಷ್ ಮತ್ತು ದರ್ಶನ್ ಎಂಬವರ ಅಸಹಾಯಕತೆ ಯನ್ನು ಮನಗಂಡು ಉದ್ಯಮಿ ದಿನೇಶ್ ಪೂಜಾರಿ ದಾನಿಗಳ ಸಹಾಯದಿಂದ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ‘ಧನುಷ್ ದರ್ಶನ್’ ನಿಲಯದ ಹಸ್ತಾಂತರ ಕಾರ್ಯಕ್ರಮ ಜು.3ರಂದು ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಜಿ.ಶಂಕರ್ ಮಾತನಾಡಿ, ಇಂತಹ ರಚನಾತ್ಮಕ ಕಾರ್ಯ ಸಮಾಜಕ್ಕೆ ಮಾದರಿ ಯಾಗಿದೆ. ಉಳ್ಳವರು ಇಲ್ಲದವರಿಗೆ ನೀಡುವುದೇ ದೊಡ್ಡ ಧರ್ಮ ಎಂದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಒಂದು ಲಕ್ಷ ರೂ. ನೆರವು ನೀಡಿದ ಜಿ.ಶಂಕರ್, ಮಣಿಪಾಲದ ಆಸ್ಪತ್ರೆಯಲ್ಲಿ ಮಕ್ಕಳ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದರು.
ಉದ್ಯಮಿ ಭುವನೇಂದ್ರ ಕಿದಿಯೂರ್ ಶುಭಹಾರೈಸಿದರು. ಸಂಸ್ಥೆಯ ಅಧ್ಯಕ್ಷ ಕೆ.ಗಣೇಶ್ ರಾವ್ ಮಾತನಾಡಿದರು. ಇದೇ ಸಂದರ್ಭದಲ್ಲಿ ದಾನಿಗಳಾದ ಯು.ವಿಶ್ವನಾಥ ಶೆಣೈ, ಪೂಜಾ ಮಾರ್ಬಲ್‌ನ ಮಾಲಕ ಶ್ರೀಪಾಲ್ ಸುರನ, ಕೃಷ್ಣಮೂರ್ತಿ ಭಟ್, ಉಮೇಶ್, ಶೇಖರ್, ಸಂತೋಷ್, ಸಂತೋಷ್ ವರ್ಮಾ, ಸುರೇಶ್, ಮಹೇಶ್, ಪ್ರಸಾದ್ ಅವರನ್ನು ಗೌರವಿಸಲಾಯಿತು.
ನಿವೃತ್ತ ಬ್ಯಾಂಕ್ ಉದ್ಯೋಗಿ ಬಾಬುರಾಯ ಶೆಣೈ, ವಾಸ್ತು ತಜ್ಞ ಯೋಗೀಶ್ ಚಂದ್ರಾಧರ ಮತ್ತು ಯಕ್ಷಗಾನ ಕಲಾರಂಗದ ಸದಸ್ಯರು ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಸಾ್ವಗತಿಸಿ ಕಾರ್ಯ ಕ್ರಮ ನಿರೂಪಿಸಿದರು.