ಉಡುಪಿ: ಗೋ ಹತ್ಯೆ ನಿಷೇಧಕ್ಕೆ ಆಗ್ರಹಿಸಿ ಧರಣಿ
ಉಡುಪಿ, ಜು.1: ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋ ಕಳ್ಳತನ, ಅಕ್ರಮ ಸಾಗಾಟ, ಹತ್ಯೆಯನ್ನು ತಡೆಯುವಂತೆ ಆಗ್ರಹಿಸಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಬುಧವಾರ ಉಡುಪಿ ತಾಲೂಕು ಕಚೇರಿಯ ಎದುರು ಧರಣಿ ನಡೆಸಿತು.
ಬಜರಂಗದಳ ಮುಖಂಡ ಶರಣ್ ಪಂಪ್‌ವೆಲ್ ಮಾತನಾಡಿ, ಸರಕಾರದ ಬೆಂಬಲದಿಂದಾಗಿ ಇಂದು ಎಲ್ಲ ಕಡೆ ರಾಜಾರೋಷವಾಗಿ ಗೋ ಕಳ್ಳತನ ನಡೆ ಯುತ್ತಿದೆ. ಇದೇ ರೀತಿ ಮುಂದುವರೆದರೆ ಮಾರಕಾಸ್ತ್ರಗಳಿಂದ ಗೋವಿನ ರಕ್ಷಣೆ ಮಾಡುವ ತಾಕತ್ತು ನಮಗೆ ಇದೆ. ಆದುದರಿಂದ ಜಿಲ್ಲಾಡಳಿತ ಜಿಲ್ಲೆಯಲ್ಲಿ ಪ್ರಾಣಿ ಕೌರ್ಯ ತಡೆ ಮಂಡಳಿಯನ್ನು ರಚಿಸಿ ಗೋಹತ್ಯೆಯನ್ನು ಡೆಯಬೇಕು ಎಂದು ಒತ್ತಾಯಿಸಿದರು.
ಈ ಕುರಿತ ಮನವಿಯನ್ನು ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮಟ್ಟಾರು ರತ್ನಾಕರ ಹೆಗ್ಡೆ, ದಿನಕರ ಬಾಬು, ಉದಯ ಕುಮಾರ್ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ, ಬಜರಂಗ ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್, ವಿಎಚ್‌ಪಿ ನಗರ ಸಂಚಾಲಕ ಸಂತೋಷ್ ಸುವರ್ಣ ಬೊಳ್ಜೆ ಮೊದಲಾದವರು ಉಪಸ್ಥಿತರಿದ್ದರು.