×
Ad

ಕೃಷಿ ಪ್ರಶಸ್ತಿ- ಭತ್ತದ ಬೆಳೆ ಸ್ಪರ್ಧೆಗೆ ರೈತರಿಂದ ಅರ್ಜಿ ಆಹ್ವಾನ

Update: 2019-07-03 20:46 IST

ಉಡುಪಿ, ಜು.3: ಕೃಷಿ ವಲಯದ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ರಾಜ್ಯದಲ್ಲಿ ಕೃಷಿ ಇಲಾಖಾ ವತಿಯಿಂದ ವಿವಿಧ ಹಂತಗಳಲ್ಲಿ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಆಯ್ಕೆ ಮಾಡಲಾದ ಬೆಳೆಗಳಲ್ಲಿ ಬೆಳೆ ಸ್ಫರ್ಧೆ ನಡೆಸಿ ಪ್ರತಿ ಹಂತದಲ್ಲಿ 3 ಬಹುಮಾನಗಳನ್ನು ನೀಡಲಾಗುತ್ತಿದೆ.

ಮುಂಗಾರು ಹಂಗಾಮಿಗೆ ಉಡುಪಿ ಜಿಲ್ಲೆಯಲ್ಲಿ ಭತ್ತದ ಬೆಳೆಯಲ್ಲಿ ರೈತರು ವಿವಿಧ ಹಂತದ ಬೆಳೆ ಸ್ಫರ್ಧೆಗೆ ನಿಗದಿತ ಪ್ರವೇಶ ಶುಲ್ಕವನ್ನು ಪಾವತಿಸಿ ಸಕ್ಷಮ ಅರ್ಜಿ, ಪಹಣಿ, ಶುಲ್ಕ ಪಾವತಿ ಚಲನ್, ಜಾತಿ ಪ್ರಮಾಣ ಪತ್ರ (ಪ.ಜಾ/ಪ.ಪಂ ರೈತರಾಗಿದ್ದಲ್ಲಿ), ರೈತರ ಛಾಯಾಚಿತ್ರ, ಭೂಮಾಲಿಕತ್ವ ಕ್ಷೇತ್ರ ಕುರಿತ ಕಂದಾಯ ಇಲಾಖೆಯ ದಾಖಲಾತಿ ಅಥವಾ ಗುತ್ತಿಗೆ ಕರಾರು ಪತ್ರ (ಲೀಸ್ ಅಗ್ರಿಮೆಂಟ್)ಗಳೊಂದಿಗೆ ಮುಂದಿನ ಆ.31ರೊಳಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾಸಹಾಯಕ ಕೃಷಿ ನಿರ್ದೇಶರ ಕಚೇರಿಗೆ ಅರ್ಜಿ ಸಲ್ಲಿಸಬಹುದು.

ವಿವಿಧ ಹಂತದ ಬೆಳೆ ಸ್ಫರ್ಧೆ ವಿಜೇತರಿಗೆ ತಾಲೂಕು ಮಟ್ಟದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವಾಗಿ 15,000 ರೂ., 10,000 ರೂ., 5,000 ರೂ. ನೀಡಲಾಗುವುದು. ಜಿಲ್ಲಾ ಮಟ್ಟದಲ್ಲಿ ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಕ್ರಮವಾಗಿ 30,000 ರೂ., 25,000 ರೂ. 20,000 ರೂ. ಹಾಗೂ ರಾಜ್ಯ ಮಟ್ಟದ ಸ್ಪರ್ಧೆಯ ವಿಜೇತರಿಗೆ ಪ್ರಥಮ 50,000 ರೂ, ದ್ವಿತೀಯ 40,000 ರೂ. ಹಾಗೂ ತೃತೀಯ 35,000 ರೂ. ಬಹುಮಾನದ ಮೊತ್ತ ನೀಡಲಾಗುವುದು.

ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದ ಸ್ಫರ್ಧೆಗೆ ಸಾಮಾನ್ಯ ವರ್ಗದ ರೈತರು ಕ್ರಮವಾಗಿ 100 ರೂ. ಹಾಗೂ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡದ ರೈತರು ಕ್ರಮವಾಗಿ 25 ರೂ. ಪ್ರವೇಶ ಶುಲ್ಕವನ್ನು ಪಾವತಿಸಿ, ಬೆಳೆ ಸ್ಫರ್ಧೆಗೆ ೆಸರು ನೋಂದಾಯಿಸಿಕೊಳ್ಳಬಹುದು.

ಕಳೆದ 3 ವರ್ಷಗಳ ಅವಧಿಯಲ್ಲಿ ಕೆಳಹಂತದ ನಿಗದಿತ ಸ್ಪರ್ಧೆಯಲ್ಲಿ ಬಹುಮಾನ ಪಡೆದ ರೈತರು ಅದೇ ಮಟ್ಟದಲ್ಲಿ ಪುನಹ ಭಾಗವಹಿಸುವಂತಿಲ್ಲ. ಆ ಬೆಳೆಯಲ್ಲಿ ಮೇಲಿನ ಹಂತದ ಸ್ಪರ್ಧೆೆ ಭಾಗವಹಿಸಲು ಅವಕಾಶವಿರುತ್ತದೆ.

ಸ್ಪರ್ಧೆಗೆ ನೋಂದಾಯಿಸುವ ರೈತರು ಕನಿಷ್ಠ ಹೆಕ್ಟೇರ್‌ಗೆ 50 ಕ್ವಿಂಟಾಲ್ ಇಳುವರಿ ಪಡೆದಲ್ಲಿ ಮಾತ್ರ ಬೆಳೆ ಸ್ಪರ್ಧೆಯಡಿ ಬಹುಮಾನಕ್ಕೆ ಪರಿಗಣಿಸಲಾ ಗುವುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿ ಸುವಂತೆ ಜಂಟಿ ಕೃಷಿ ನಿದೇಶರ್ಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News