ಪ್ರಕಟನೆ ನೀಡಿ ಕೈತೊಳೆದುಕೊಳ್ಳಬೇಡಿ: ಎಬಿವಿಪಿಗೆ ಮಹೇಂದ್ರ ಕುಮಾರ್ ಚಾಟಿ

Update: 2019-07-03 15:39 GMT

ಮಂಗಳೂರು, ಜು.3: ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿರುವ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾರ್ಥಿ ಸಂಘಟನೆ ಎಬಿವಿಪಿಗೆ ಮಹೇಂದ್ರ ಕುಮಾರ್ ಕುಟುಕಿದ್ದಾರೆ.

ಈ ಬಗ್ಗೆ ಫೇಸ್ ಬುಕ್ ಪೋಸ್ಟ್ ಮಾಡಿರುವ ಅವರು, “ಪುತ್ತೂರಿನ ಕ್ರೌರ್ಯದ ವಿಚಾರದಲ್ಲಿ ಜಾತಿ ತರಬೇಡಿ. ಧರ್ಮ ತರಬೇಡಿ. ಕೇಸರಿ ತರಬೇಡಿ. ಹಸಿರು ತರಬೇಡಿ.. ನಿಜ ಈ ಮಾತುಗಳನ್ನು ಖಂಡಿತವಾಗಿಯೂ ನಾನು ಒಪ್ಪುತ್ತೇನೆ .ಆದರೆ ಈ ಮಾತುಗಳನ್ನು ಹೇಳುತ್ತಿರುವವರು ಆಡುತ್ತಿರುವವರು ಯಾರು ?, ಪ್ರತಿ ಘಟನೆಗೂ ಹಸಿರು ಎಳೆದು ತಂದವರು ಧರ್ಮದ ಬಣ್ಣ ಹಚ್ಚಿದವರು ಸಮಾಜವನ್ನು ಒಡೆದವರು ಇಂದು ಈ ಮಾತುಗಳನ್ನು ಆಡುತ್ತಿದ್ದಾರೆ ... ಇದೇ ಮಾನಸಿಕತೆ ಪ್ರತಿ ಘಟನೆಯಲ್ಲೂ ಇದ್ದರೆ ಇಂತಹ ಘಟನೆಗಳು ನಡೆಯುವುದೇ ಇಲ್ಲ ಸಮಾಜಕ್ಕೊಂದು ಜವಾಬ್ದಾರಿ ಬರುವ ರೀತಿ ಎಲ್ಲ ಸಂದರ್ಭಗಳಲ್ಲೂ ನಡೆದುಕೊಳ್ಳಬೇಕು”.

“ಈ ಘಟನೆಗೆ ಸಂಬಂಧಪಟ್ಟಂತೆ ಎಬಿವಿಪಿ ಪ್ರಕಟಣೆ ಹೊರಡಿಸಿದೆ. ನಿಮ್ಮದೇ ಸಂಘಟನೆಯ ಹುಡುಗರು ನಿಮ್ಮದೇ ಗರಡಿಯಲ್ಲಿ ಬೆಳೆದ ಹುಡುಗರು ನಿಮ್ಮದೇ ಶಾಖೆಗಳಲ್ಲಿ ಭಾಗವಹಿಸಿದ ಹುಡುಗರು ನಿಮ್ಮದೇ ಕಾರ್ಯಕ್ರಮಗಳಿಗೆ ಶಕ್ತಿ ತುಂಬಿಸಿದ ಹುಡುಗರು ನಿಮ್ಮ ಸಂಸ್ಕೃತಿಯಲ್ಲೇ ಪಳಗಿದ ಹುಡುಗರು ನಿಮ್ಮದೇ ಕೇಂದ್ರ ಬಿಂದು ಕಾಲೇಜಿನಲ್ಲಿ ಸಂಪೂರ್ಣ ಸಂಘಮಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹುಡುಗರು ಹೀನ ಕೃತ್ಯದಲ್ಲಿ ಭಾಗವಹಿಸಿದ ತಕ್ಷಣ ಪ್ರಕಟಣೆ ಹೊರಡಿಸಿ ಬಿಟ್ಟರೆ ಮುಗಿದು ಹೋಗುವುದಿಲ್ಲ ನಿಮ್ಮದೇ ಕಾಲೇಜಿನ ಮಗುವಿಗೆ ಅನ್ಯಾಯವಾಗಿದೆ. ಪೋಷಕರು ಎದೆ ಒಡೆದುಕೊಳ್ಳುತ್ತಿದ್ದಾರೆ. ನ್ಯಾಯ ಕೊಡಿ, ನ್ಯಾಯ ಸಿಗುವವರೆಗೆ ನಿಮ್ಮ ಕಾಲೇಜಿನಲ್ಲೂ ಸೇರಿದಂತೆ ಪ್ರತಿಯೊಂದು ಕಡೆಯೂ ಹೋರಾಟ ಮಾಡಿ, ಅದು ನಿಮ್ಮ ಜವಾಬ್ದಾರಿ, ಪ್ರಕಟಣೆ ಹೊರಡಿಸಿ ಕೈತೊಳೆದುಕೊಳ್ಳಬೇಡಿ”.

“ಆ ಹುಡುಗರಿಗೆ ಗಲ್ಲು ಶಿಕ್ಷೆ ಆಗುವವರೆಗೂ ನಿಮ್ಮ ಹೋರಾಟವಿರಲಿ, ಯಾಕೆಂದರೆ ಆ ಮಗು ನಿಮ್ಮ ಸಂಘಟನೆಯ ವಿದ್ಯಾರ್ಥಿನಿ ಸಂಘದ ಮಗು. ಈ ಕೃತ್ಯ ನಡೆಸಿದ ಆ ಯುವಕರಿಗೆ ಇಷ್ಟೊಂದು ಧೈರ್ಯ ಹೇಗೆ ಬಂತು ಎಂಬುದರ ಬಗ್ಗೆಯೂ ಅವಲೋಕನ ನಡೆಸಿ, ನಾವು ಸಂಘದ ಯುವಕರು ನಮ್ಮ ಹಿಂದೆ ಜನಪ್ರತಿನಿಧಿಗಳಿದ್ದಾರೆ ಶಕ್ತಿಯಿದೆ, ನಾವು ಏನನ್ನು ಬೇಕಾದರೂ ಜಯಿಸಬಲ್ಲವು ಎಂಬ ಮಾನಸಿಕತೆಯಿಂದ ಮೊದಲು ಹೊರತನ್ನಿ. ವಿದ್ಯಾರ್ಥಿ ಕಾರ್ಯಕರ್ತರನ್ನು ಮತ್ತು ಹೊರಗಿರುವ ನಿಮ್ಮ ಸಂಘಟನೆಯ ಎಲ್ಲ ಕಾರ್ಯಕರ್ತರನ್ನು ಈ ಮಾನಸಿಕತೆಯಿಂದ ಹೊರತರುವ ಪ್ರಯತ್ನ ಮಾಡಿ ಕೆಲಸ ಮಾಡಿ ....” ಎಂದಿದ್ದಾರೆ.

ಅವರ ಫೇಸ್ ಬುಕ್ ಪೋಸ್ಟ್ ಈ ಕೆಳಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News