ಬೆಂಕಿ ಅಕಸ್ಮಿಕ ಸಂಭವಿಸಿದ ಸ್ಥಳಗಳಲ್ಲಿ ವನಮಹೋತ್ಸವ

Update: 2019-07-03 16:50 GMT

ಉಡುಪಿ, ಜು.3: ಉಡುಪಿ ಅಜ್ಜರಕಾಡು ವಾರ್ಡಿನ ಕಿತ್ತೂರು ಚೆನ್ನಮ್ಮ ಮಾರ್ಗ, ಜೀವವಿಮಾ ಕಛೇರಿ ಮಾರ್ಗದಲ್ಲಿ ಬೆಂಕಿ ಅಕಸ್ಮಿಕದಿಂದ ಜೀವ ಕಳೆದುಕೊಂಡ ಸಾಲು ಮರಗಳ ಬದಲಿಗೆ ಅದೇ ಸ್ಥಳದಲ್ಲಿ ಉಡುಪಿಯ ಪಂಚರತ್ನ ಸೇವಾ ಟ್ರಸ್ಟ್ ವತಿಯಿಂದ ಗಿಡಗಳನ್ನು ನೆಡುವ ಮೂಲಕ ಇಂದು ವನ ಮಹೋತ್ಸವ ಆಚರಿಸಲಾಯಿತು.

ಮುಂದಿನ ದಿನಗಳಲ್ಲಿ ನಗರದ ರಸ್ತೆಗಳಲ್ಲಿ ಕೀಟಬಾಧೆ, ಅಗ್ನಿ ದುರಂತ, ಹಾಗೂ ಬೀಸುವ ಗಾಳಿಗೆ ಬಿದ್ದು, ಜೀವ ಕಳೆದುಕೊಂಡಿರುವ ಸಾಲು ಮರಗಳನ್ನು ಗುರುತಿಸಿ, ಅವುಗಳ ಬದಲಿಗೆ ಅದೇ ಸ್ಥಳದಲ್ಲಿ ಗಿಡಗಳ ನೆಡುವ ಯೋಜನೆಯನ್ನು ಪಂಚರತ್ನ ಸೇವಾ ಟ್ರಸ್ಟ್ ಹಮ್ಮಿಕೊಂಡಿದೆ ಎಂದು ಟ್ರಸ್ಟಿನ ಅಧ್ಯಕ್ಷ ನಿತ್ಯಾನಂದ ಒಳಕಾಡು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಟ್ರಸ್ಟಿನ ಉಪಾಧ್ಯಕ್ಷ ತಾರಾನಾಥ್ ಮೇಸ್ತ ಶಿರೂರು, ಪ್ರಧಾನ ಕಾರ್ಯದರ್ಶಿ ಸಂತೋಷ್ ಸರಳಬೆಟ್ಟು, ಕೋಶಾಧಿಕಾರಿ ಪಲ್ಲವಿ ಸಂತೋಷ್ ಹಾಗೂ ಪರಿಸರ ಪ್ರೇಮಿಗಳಾದ ಬಿ.ರಾಘವೇಂದ್ರ ರಾವ್ ಬೈಕಾಡಿ, ಶೇಖ್ ಉಮರ್, ಮಾಯ ಭಟ್, ರವಿರಾಜ್ ಶೆಟ್ಟಿ, ಹನುಮಂತ ಐಹೊಳೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News