ನದಿಗಳಿಗೆ ಮಾನವ ಹಕ್ಕುಗಳು, ಸ್ಥಾನಮಾನ ನೀಡಿದ ಹೈಕೋರ್ಟ್ !

Update: 2019-07-03 16:53 GMT

ಢಾಕಾ (ಬಾಂಗ್ಲಾದೇಶ), ಜು. 3: ಬಾಂಗ್ಲಾದೇಶದ ನದಿಗಳನ್ನು ಅತಿಕ್ರಮಣದಿಂದ ಪಾರು ಮಾಡುವುದಕ್ಕಾಗಿ, ಆ ದೇಶದ ಹೈಕೋರ್ಟ್ ನದಿಗಳಿಗೆ ಮಾನವ ಹಕ್ಕುಗಳು ಮತ್ತು ಸ್ಥಾನಮಾನಗಳನ್ನು ನೀಡಿದೆ.

  ಢಾಕಾದ ಮಾನವಹಕ್ಕು ಗುಂಪೊಂದು 2016ರಲ್ಲಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ನ್ಯಾಯಾಲಯವು ಸೋಮವಾರ ಮೈಲಿಗಲ್ಲು ತೀರ್ಪನ್ನು ನೀಡಿದೆ ಎಂದು ಅರ್ಜಿದಾರರ ಪರ ವಕೀಲ ಮಂಝಿಲ್ ಮುರ್ಶಿದ್ ಮಂಗಳವಾರ ತಿಳಿಸಿದರು.

ಈ ತೀರ್ಪಿನ ಪ್ರಕಾರ, ದೇಶದಲ್ಲಿರುವ ನೂರಾರು ನದಿಗಳನ್ನು ಕಾನೂನುಬದ್ಧ ಜನರಂತೆ ಪರಿಗಣಿಸಲಾಗುವುದು ಎಂದು ಅವರು ಹೇಳಿದರು.

‘‘ಪ್ರಭಾವಶಾಲಿ ಅತಿಕ್ರಮಣಕಾರರಿಂದ ನದಿಗಳನ್ನು ರಕ್ಷಿಸುವಂತೆ ಕೋರಿ ನಾವು ಅರ್ಜಿ ಸಲ್ಲಿಸಿದ್ದೆವು. ಎಲ್ಲ ನದಿಗಳು ಕಾನೂನು ಬದ್ಧ ವ್ಯಕ್ತಿಗಳು ಹೊಂದಿರುವ ಹಕ್ಕುಗಳನ್ನೇ ಹೊಂದುತ್ತವೆ ಎಂಬುದಾಗಿ ನ್ಯಾಯಾಲಯ ಈಗ ಘೋಷಿಸಿದೆ’’ ಎಂದು ಎಎಫ್‌ಪಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು ಹೇಳಿದರು.

ಬಾಂಗ್ಲಾದೇಶವು ತನ್ನ ಜಲಮಾರ್ಗಗಳಿಗೆ ಈ ಸ್ಥಾನಮಾನ ನೀಡಿದ ತಿಂಗಳುಗಳ ಬಳಿಕ ನ್ಯಾಯಾಲಯದ ಈ ಆದೇಶ ಹೊರಬಿದ್ದಿದೆ. ಕೊಲಂಬಿಯ, ಭಾರತ ಮತ್ತು ನ್ಯೂಝಿಲ್ಯಾಂಡ್ ಬಳಿಕ, ನದಿಗಳಿಗೆ ಮಾನವನ ಮಹತ್ವವನ್ನು ನೀಡಿದ ನಾಲ್ಕನೇ ದೇಶ ಬಾಂಗ್ಲಾದೇಶವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News